ಸಿಬಿಎಸ್ಇ: 12ನೇ ತರಗತಿಗೆ ಎಕನಾಮಿಕ್ಸ್ ಮರುಪರೀಕ್ಷೆ ಏ.25ಕ್ಕೆ, 10ನೇ ತರಗತಿ ಗಣಿತ ದೆಹಲಿ, ಹರ್ಯಾಣದಲ್ಲಿ ಮಾತ್ರ

ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ 10 ನೇ ತರಗತಿಯ ಗಣಿತ ಹಾಗೂ 12 ನೇ ತರಗತಿಯ ಅರ್ಥಶಾಸ್ತ್ರಕ್ಕೆ ಮರುಪರೀಕ್ಷೆ ದಿನಾಂಕವನ್ನು ಶಿಕ್ಷಣ ಇಲಾಖೆ ಘೋಷಿಸಿದೆ.
ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ: 12 ನೇ ತರಗತಿಗೆ ಏ.25 ರಂದು ಮರುಪರೀಕ್ಷೆ 10 ನೇ ತರಗತಿಗೆ ಜುಲೈ ನಲ್ಲಿ ಪರೀಕ್ಷೆ ಸಾಧ್ಯತೆ
ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ: 12 ನೇ ತರಗತಿಗೆ ಏ.25 ರಂದು ಮರುಪರೀಕ್ಷೆ 10 ನೇ ತರಗತಿಗೆ ಜುಲೈ ನಲ್ಲಿ ಪರೀಕ್ಷೆ ಸಾಧ್ಯತೆ
Updated on
ನವದೆಹಲಿ: ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ 10 ನೇ ತರಗತಿಯ ಗಣಿತ ಹಾಗೂ 12 ನೇ ತರಗತಿಯ ಅರ್ಥಶಾಸ್ತ್ರಕ್ಕೆ ಮರುಪರೀಕ್ಷೆ ದಿನಾಂಕವನ್ನು ಶಿಕ್ಷಣ ಇಲಾಖೆ ಘೋಷಿಸಿದೆ. 
ಮಾ.30 ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ್ ಸ್ವರೂಪ್, 12 ನೇ ತರಗತಿಯ ಅರ್ಥಶಾಸ್ತ್ರಕ್ಕೆ ಏ.25 ರಂದು ಮರುಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ 10 ನೇ ತರಗತಿ ಗಣಿತಶಾಸ್ತ್ರದ ಮರುಪರೀಕ್ಷೆಯ ಬಗ್ಗೆಯೂ ಶಿಕ್ಷಣ ಇಲಾಖೆ ಕಾರ್ಯದರ್ಶಿ ಮಾಹಿತಿ ನೀಡಿದ್ದು, 10 ನೇ ತರಗತಿಯ ಮರುಪರೀಕ್ಷೆ ದೆಹಲಿ ಮತ್ತು ಹರ್ಯಾಣ ರಾಜ್ಯಗಳಲ್ಲಿ ಮಾತ್ರ ನಡೆಯಲಿದೆ ಎಂದು ತಿಳಿಸಿದ್ದಾರೆ. 
10 ನೇ ತರಗತಿಯ ಮರುಪರೀಕ್ಷೆ ಬಗ್ಗೆ ಇನ್ನು 15 ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು, 10 ನೇ ತರಗತಿಯ ಮರುಪರೀಕ್ಷೆ ಜುಲೈ ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com