ಉದೈಪುರ್: ಪೊಲೀಸ್ ಠಾಣೆ ಟೆರೇಸ್ ನಲ್ಲಿ ವಿದೇಶಿ ಜೋಡಿಯ ಸೆಕ್ಸ್; ವಿಡಿಯೋ ವೈರಲ್!

ಅಚ್ಚರಿಯ ಘಟನೆಯಲ್ಲಿ ಪೊಲೀಸ್ ಠಾಣೆ ಟೆರೇಸ್ ನಲ್ಲಿ ವಿದೇಶಿ ಜೋಡಿ ಸೆಕ್ಸ್ ಮಾಡುತ್ತಿರುವ ವಿಡಿಯೋ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಉದೈಪುರ್: ಪೊಲೀಸ್ ಠಾಣೆ ಟೆರೇಸ್ ನಲ್ಲಿ ವಿದೇಶಿ ಜೋಡಿಯ ಸೆಕ್ಸ್; ವಿಡಿಯೋ ವೈರಲ್!
ಉದೈಪುರ್: ಪೊಲೀಸ್ ಠಾಣೆ ಟೆರೇಸ್ ನಲ್ಲಿ ವಿದೇಶಿ ಜೋಡಿಯ ಸೆಕ್ಸ್; ವಿಡಿಯೋ ವೈರಲ್!
ಉದೈಪುರ್: ಅಚ್ಚರಿಯ ಘಟನೆಯಲ್ಲಿ ಪೊಲೀಸ್ ಠಾಣೆ ಟೆರೇಸ್ ನಲ್ಲಿ ವಿದೇಶಿ ಜೋಡಿ ಸೆಕ್ಸ್ ಮಾಡುತ್ತಿರುವ ವಿಡಿಯೋ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. 
ಘಂತಘರ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋದಲ್ಲಿರುವ ವಿದೇಶಿ ಜೋಡಿಯ ಗುರುತು ಇನ್ನೂ ಪತ್ತೆಯಾಗಿಲ್ಲ.  ಈ ಪೊಲೀಸ್ ಠಾಣೆಯ ಟೆರೇಸ್ ಗೆ ಹೋಗಲು ಠಾಣೆಯ ಒಳಭಾಗದಿಂದ ಮಾತ್ರ ಜಾಗವಿರುವುದು ಈ ಘಟನೆ ಮತ್ತಷ್ಟು ಅಚ್ಚರಿ ಹಾಗೂ ಅನುಮಾನಗಳನ್ನು ಮೂಡಿಸಿದೆ. 
ಪೊಲೀಸ್ ಠಾಣೆಯ ಎಸ್ ಪಿ ರಾಜೇಂದ್ರ ಪ್ರಸಾದ್ ಗೋಯಲ್ ಅಲ್ಲಿನ ಸ್ಥಳೀಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ವಿಡಿಯೋದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಅಂತಹ ವಿಡಿಯೋಗಳು ನೈಜವಲ್ಲ ಎಂದೂ ಹೇಳಿದ್ದಾರೆ. ನವದೆಹಲಿಯ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ನಲ್ಲಿ ಇದೇ ರೀತಿ ಪೋರ್ನ್ ವಿಡಿಯೋ ಪ್ರಸಾರವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com