

ಗುಂಟೂರು : ಆಂಧ್ರಪ್ರದೇಶದ ಗುಂಟೂರಿನಲ್ಲಿ ನೆರೆಮನೆಯ 60 ವರ್ಷದ ವೃದ್ದನೋರ್ವ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಬಗ್ಗೆ ವರದಿಯಾಗಿದೆ.
ಗುರಾಜಾಲದಲ್ಲಿನ ಸ್ಥಳೀಯ ನಿವಾಸಿಯಿಂದಲೇ ಅತ್ಯಾಚಾರ ನಡೆದಿದ್ದು, ಬಹಾಮಾ ನಾಯ್ಡು ಪ್ರತಿಮೆ ಮುಂಭಾಗ ಧರಣಿ ನಡೆಸಿದ ಗ್ರಾಮಸ್ಥರು , ಅಪ್ರಾಪ್ತ ವಯಸ್ಸಿನ ಬಾಲಕಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.
ರಿಕ್ಷಾ ಓಡಿಸುವ 60 ವರ್ಷದ ವೃದ್ದನಿಂದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಗುಂಟೂರು ಪೊಲೀಸ್ ವರಿಷ್ಠಾಧಿಕಾರಿ ಅಪ್ಪಾಲಾ ನಾಯ್ಡು ತಿಳಿಸಿದ್ದಾರೆ.
ಸಂತ್ರಸ್ತೆಯ ದೇಹದ ಮೇಲೆ ಕೆಲ ಗಾಯಗಳಾಗಿದ್ದು, ಆರೋಪಿ ನಾಪತ್ತೆಯಾಗಿದ್ದಾನೆ
ಆತನ ಪತ್ತೆಗಾಗಿ ಪೊಲೀಸರ ತಂಡವನ್ನು ರಚಿಸಲಾಗಿದ್ದು, ಶೋಧ ಕಾರ್ಯ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
12 ವರ್ಷಕ್ಕಿಂತ ಮಕ್ಕಳ ಮೇಲಿನ ಅತ್ಯಾಚಾರ ನಡೆಸುವ ದುಷ್ಕರ್ಮಿಗಳನ್ನು ಗಲ್ಲಿಗೇರಿಸುವ ಸುಗ್ರೀವಾಜ್ಞೆ ಜಾರಿಯಾಗಿದ್ದರೂ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇವೆ.