ನರೇಂದ್ರ ಮೋದಿ ರಿಪೋರ್ಟ್ ಕಾರ್ಡ್ ಗೆ 'ಎಫ್ ಗ್ರೇಡ್' ನೀಡಿದ ರಾಹುಲ್ ಗಾಂಧಿ

ಕರ್ನಾಟಕದ ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನು ಎಂಬ ಬಗ್ಗೆ ರಿಪೋರ್ಟ್‌ ಕಾರ್ಡನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ...
ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ
ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ
ನವದೆಹಲಿ: ಕರ್ನಾಟಕದ ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನು ಎಂಬ ಬಗ್ಗೆ ರಿಪೋರ್ಟ್‌ ಕಾರ್ಡನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇಂದು ಟ್ವಿಟರ್‌ನಲ್ಲಿ ನೀಡಿದ್ದಾರೆ. 
ಕರ್ನಾಟಕ ಕೃಷಿ ವಲಯಕ್ಕೆ ಮೋದಿ ನೀಡಿರುವ ಕೊಡುಗೆಗಳಿಗೆ  ರಾಹುಲ್‌ ಕಳಪೆ  'ಎಫ್ ಗ್ರೇಡ್ ಕೊಟ್ಟಿದ್ದಾರೆ.
ರಾಹುಲ್‌ ಟ್ವಿಟರ್‌ನಲ್ಲಿ  ಹೀಗೆ ಬರೆದಿದ್ದಾರೆ : ಪ್ರಧಾನಿ  ಮೋದಿ ಅವರ ರಿಪೋರ್ಟ್‌ ಕಾರ್ಡ್‌ - ರಾಜ್ಯ ಕರ್ನಾಟಕ; ವಿಷಯ: ಕೃಷಿ. 
1. ಕರ್ನಾಟಕ ಸರಕಾರ ಮಂಜೂರು ಮಾಡಿರುವ 8,500 ಕೋಟಿ ರೂ. ಕೃಷಿ ಸಾಲ ಮನ್ನಾಗೆ ಮೋದಿ ಕೊಡುಗೆ : ಶೂನ್ಯ ರೂಪಾಯಿ.
2. ಪ್ರಧಾನಿಯವರ ಕೃಷಿ ವಿಮೆ ಯೋಜನೆ: ರೈತರು ಸಂಕಷ್ಟದಲ್ಲಿ; ಖಾಸಗಿ ವಿಮಾ ಕಂಪೆನಿಗಳಿಗೆ  ಲಾಭ.
3. ಕರ್ನಾಟಕ ರೈತರಿಗೆ ಎಂಎಸ್‌ಪಿ + 50% ಇಲ್ಲ : ಗ್ರೇಡ್‌ ಎಫ್. 
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ತಮ್ಮ ಮೂರನೇ ಸುತ್ತಿನ ಪ್ರಚಾರಾಭಿಯಾನಕ್ಕೆ ತೊಡಗಿ ಮುಂದಿನ ಕೆಲವೇ ದಿನಗಳಲ್ಲಿ 12 ರಾಲಿಗಳನ್ನು ನಡೆಸಿಕೊಡಲಿರುವಂತೆಯೇ ರಾಹುಲ್‌ ಅವರಿಂದ ಈ "ರಿಪೋರ್ಟ್‌ ಕಾರ್ಡ್‌' ಟ್ವಿಟರ್‌ ದಾಳಿ ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com