ಪಾಟ್ನಾ: ಪುತ್ರ ತೇಜ್ ಪ್ರತಾಪ್ ಯಾದವ್ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ 5 ದಿನಗಳ ಪೆರೋಲ್ ಮಂಜೂರು ಮಾಡಲಾಗಿದೆ.
ಬಹು ಕೋಟಿ ಮೇವು ಹಗರಣದಲ್ಲಿ ಅಪರಾಧಿಯಾಗಿರುವ ಲಾಲು ಕಳೆದ ಡಿಸೆಂಬರ್ ನಿಂದ ಸೆರೆವಾಸದಲ್ಲಿದ್ದಾರೆ.
ಲಾಲು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ವಿವಾಹ ಮೇ 12 ರಂದು ಪಾಟ್ನಾದಲ್ಲಿ ನಡೆಯಲಿದೆ, ತೇಜ್ ಪ್ರತಾಪ್ ಆರ್ ಜೆಡಿ ಲೀಡರ್ ಚಂದ್ರಿಕ ಪ್ರಸಾದ್ ರೈ ಅವರ ಹಿರಿಯ ಮಗಳು ಐಶ್ವರ್ಯ ರೈ ಅವರನ್ನು ವರಿಸುತ್ತಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಬಿರ್ಸಾ ಮುಂಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಅನಾರೋಗ್ಯದ ಕಾರಣ ಮಾರ್ಚ್ 29 ರಂದು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು,