

ನವದೆಹಲಿ : ಪೆಟ್ರೋಲ್ ಬೆಲೆ ಏರಿಕೆ ವಿಷಯವನ್ನು ಕೇಂದ್ರಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಪೆಟ್ರೋಲ್ ದರ ಇಳಿಕೆ ಮಾಡಲು ಸೂತ್ರವೊಂದನ್ನು ತಯಾರಿಸುತ್ತಿದ್ದೇವೆ. ಪೆಟ್ರೋಲ್ ಸಚಿವ ಧರ್ಮೇಂದ್ರ ಪ್ರಧಾನ್ ನಾಳೆ ತೈಲ ಕಂಪನಿಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದೇಶಾದ್ಯಂತ ಇಂದಿನಿಂದ ಗಣನೀಯ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ಬೆಳಿಗ್ಗೆಯಿಂದ ಜಾರಿಯಾಗುವಂತೆ ದೆಹಲಿಯಲ್ಲಿ ಪೆಟ್ರೋಲ್ ದರ 76. 87 ರೂ. ಕೋಲ್ಕತ್ತಾದಲ್ಲಿ 79.53, ಮುಂಬೈಯಲ್ಲಿ 84.7 ಹಾಗೂ ಚೆನ್ನೈಯಲ್ಲಿ 79. 79 ರೂ ಆಗಿದೆ.
ಭಾರತೀಯ ತೈಲ ನಿಗಮದ ಪ್ರಕಾರ ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 68. 08 ರೂ ಆಗಿದೆ. ಕೋಲ್ಕತ್ತಾದಲ್ಲಿ 70.63, ಮುಂಬೈಯಲ್ಲಿ 72.48 ಹಾಗೂ ಚೆನ್ನೈಯಲ್ಲಿ 71. 87 ರೂ ಆಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದಾಗಿ ಜನಸಾಮಾನ್ಯರು ಹೈರಾಣು ಆಗುವಂತಾಗಿದೆ.