ಪ್ರಯಾಣಿಕರಿಗೆ ಸಿಹಿ ಸುದ್ದಿ; ರದ್ದತಿ ಶುಲ್ಕವಿಲ್ಲ, ವಿಮಾನ ವಿಳಂಬವಾದರೆ ಪರಿಹಾರ!

ವಿಮಾನದ ಟಿಕೆಟ್ ಬುಕ್ಕಿಂಗ್ ರದ್ದು ಮತ್ತು ವಿಮಾನ ರದ್ದಾದರೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ವಿಮಾನಯಾನ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.
ವಿಮಾನ
ವಿಮಾನ
Updated on: 
ನವದೆಹಲಿ: ವಿಮಾನದ ಟಿಕೆಟ್ ಬುಕ್ಕಿಂಗ್ ರದ್ದು ಮತ್ತು ವಿಮಾನ ರದ್ದಾದರೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ವಿಮಾನಯಾನ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ. 
ಇನ್ನು ವಿಮಾನ ಹೊರಡುವುದು ತಡವಾದರೆ ಅದಕ್ಕೆ ಸಂಬಂಧಪಟ್ಟ ಏರ್ ಲೈನ್ಸ್ ಕಂಪನಿ ಪರಿಹಾರ ನೀಡಬೇಕು. ಈ ಸಂಬಂಧ ವಿಮಾನಯಾನ ಸಚಿವಾಲಯ ಕರಡು ಚಾರ್ಟರ್ ಬಿಡುಗಡೆ ಮಾಡಿದೆ. 
ಕರಡಿನಲ್ಲಿ ವಿಮಾನ ಪ್ರಯಾಣ ರದ್ದು ಶುಲ್ಕ, ಸಂಪರ್ಕ ವಿಮಾನ ಅಲಭ್ಯ ಹಾಗೂ ವಿಮಾನದಲ್ಲಿ ವೈಫೈ ದೊರೆಯದಿದ್ದಾಗ ನೀಡಬೇಕಾದ ಪರಿಹಾರಗಳಿಗೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಪ್ರಯಾಣಿಕರಿಗೆ ವಿವರಿಸಲಾಗಿದೆ. 
ಪ್ರಯಾಣಿಕರು 96 ಗಂಟೆಗಳ ನಂತರ ಪ್ರಯಾಣಿಸಲು ಪಡೆದ ಟಿಕೆಟ್ ಗಳನ್ನು 24 ಗಂಟೆಯೊಳಗೆ ರದ್ದು ಮಾಡಿದರೆ ಯಾವುದೇ ಶುಲ್ಕ ನೀಡಬೇಕಿಲ್ಲ ಎಂಬ ವಿಶೇಷ ನಿಯಮವನ್ನೂ ಚಾರ್ಟರ್ ಒಳಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com