ಭೀಕರ ಕೊಲೆ: ಮಾಡೆಲ್ ಜತೆಗಿನ ಅನೈತಿಕ ಸಂಬಂಧ ಉಳಿಸಿಕೊಳ್ಳಲು ಪತ್ನಿಯನ್ನು ರಸ್ತೆ ಮಧ್ಯೆ ಗುಂಡಿಕ್ಕಿ ಕೊಂದ ಪತಿ!

ಮಾಡೆಲ್ ಜತೆಗಿನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯನ್ನು ಮಾಡೆಲ್ ಜತೆ ಸೇರಿ ಪತಿಮಯಾಶಯ ನಡು ರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ...
ಮಾಡೆಲ್ ಎಂಜಲ್ ಗುಪ್ತಾ
ಮಾಡೆಲ್ ಎಂಜಲ್ ಗುಪ್ತಾ
ನವದೆಹಲಿ: ಮಾಡೆಲ್ ಜತೆಗಿನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯನ್ನು ಮಾಡೆಲ್ ಜತೆ ಸೇರಿ ಪತಿಮಯಾಶಯ ನಡು ರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
38 ವರ್ಷದ ಮಂಜಿತ್ ಎಂಬಾತ ತನ್ನ ಪತ್ನಿ ಸುನೀತಾಳನ್ನು ಶಾಲೆಗೆ ಹೋಗುವ ಮಾರ್ಗ ಮಧ್ಯೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಈ ಸಂಬಂಧ ಮಂಜಿತ್ ಹಾಗೂ 26 ವರ್ಷದ ಮಾಡೆಲ್ ಎಂಜಲ್ ಗುಪ್ತಾ ಅಲಿಯಾಸ್ ಶಶಿ ಪ್ರಭಾ ಮತ್ತು ರಾಜೀವ್ ಎಂಬಾನನ್ನು ಪೊಲೀಸರು ಬಂಧಿಸಿದ್ದಾರೆ.  
ಎರಡು ಮಕ್ಕಳ ತಂದೆಯಾಗಿದ್ದ ಮಂಜಿತ್, ಮಾಡೆಲ್ ಎಂಜಲ್ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಷಯ ತಿಳಿದ ಪತ್ನಿ ಸುನೀತಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಸುನೀತಾಳನ್ನು ಮುಗಿಸಲು ಇಬ್ಬರು ಸಂಚು ರೂಪಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com