

ಮಾಲ್ಕಾಂಗಿರಿ: ಒಡಿಶಾ ರಾಜ್ಯದ ಮಾಲ್ಕಾಂಗಿರಿ ಜಿಲ್ಲೆಯ ಕಾಲಿಮೇಡಾ ಬಳಿ ಇಂದು ಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಐವರು ನಕ್ಸಲೀಯರನ್ನು ಹತ್ಯೆ ಮಾಡಿದ್ದಾರೆ.
ನಕ್ಸಲೀಯರು ಮೃತದೇಹಳಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದಾಗ್ಯೂ, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಡಿಸೆಂಬರ್ 11 ರಂದು ಮತದಾನ ನಡೆಯುವ ಛತ್ತೀಸ್ ಗಡದ ದಾಂತೇವಾಡ ಜಿಲ್ಲೆಯ ಬಳಿ ಕಳೆದ ವಾರ ನಡೆದ ಕಾರ್ಯಾಚರಣೆಯಲ್ಲಿ ಮೂವರು ಪೊಲೀಸರು ಹಾಗೂ ದೂರದರ್ಶನದ ಕ್ಯಾಮರಾಮ್ಯಾನ್ ನಕ್ಸಲೀಯರಿಂದ ಹತ್ಯೆಯಾಗಿದ್ದರು.
ಮಧ್ಯ ಭಾರತದ ದಟ್ಟ ಅರಣ್ಯ ಪ್ರದೇಶವಾದ ದಾಂತೇವಾಡ ಜಿಲ್ಲೆಯ ಅರಾನ್ ಪುರ ಗ್ರಾಮದ ದೂರದರ್ಶನ ಸಿಬ್ಬಂದಿ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿದ್ದವು.