ದೆಹಲಿ: 'ಸುಪ್ರೀಂ' ಆದೇಶ ಉಲ್ಲಂಘಿಸಿ ಪಟಾಕಿ ಹೊಡೆದಿದ್ದಕ್ಕೆ 550 ಕೇಸ್, 300 ಮಂದಿ ಬಂಧನ!
ವಾಯುಮಾಲಿನ್ಯ ತಡೆಗಟ್ಟಲು ಪಟಾಕಿ ಹೊಡೆಯಲು ಸುಪ್ರೀಂ ಕೋರ್ಟ್ ಸಮಯ ನಿಗದಿಪಡಿಸಿದ್ದರೂ ಅದನ್ನು ಉಲ್ಲಂಘಸಿದವರ ವಿರುದ್ಧ ದೆಹಲಿ ಪೊಲೀಸರು ಕೇಸ್ ದಾಖಲಿಸಿದ್ದು 300 ಮಂದಿಯನ್ನು ಬಂಧಿಸಿದ್ದಾರೆ...
ನವದೆಹಲಿ: ವಾಯುಮಾಲಿನ್ಯ ತಡೆಗಟ್ಟಲು ಪಟಾಕಿ ಹೊಡೆಯಲು ಸುಪ್ರೀಂ ಕೋರ್ಟ್ ಸಮಯ ನಿಗದಿಪಡಿಸಿದ್ದರೂ ಅದನ್ನು ಉಲ್ಲಂಘಸಿದವರ ವಿರುದ್ಧ ದೆಹಲಿ ಪೊಲೀಸರು ಕೇಸ್ ದಾಖಲಿಸಿದ್ದು 300 ಮಂದಿಯನ್ನು ಬಂಧಿಸಿದ್ದಾರೆ.
ಸುಮಾರು 550 ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು 2,776 ಕೆಜಿ ಪಟಾಕಿಯನ್ನು ವಶಪಡಿಸಿಕೊಂಡಿದ್ದಾರೆ. 87 ಮಂದಿಯನ್ನು ಬಂಧಿಸಿದ್ದು 72 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಸುಮಾರು 562 ಪ್ರಕರಣಗಳನ್ನು ದಾಖಲಿಸಲಾಗಿದ್ದು 310 ಮಂದಿಯನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಹೊರಬಂದಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೀಪಾವಳಿಯಂದು ಪ್ರತಿನಿತ್ಯ ರಾತ್ರಿ 8 ಗಂಟೆಯಿಂದ 10 ಗಂಟೆಯೊಳಗೆ ಮಾತ್ರ ಪಟಾಕಿ ಹೊಡೆಯಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.