ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮರಣಾ 75 ರೂಪಾಯಿ ಮುಖಬೆಲೆಯ ನಾಣ್ಯ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿ 75 ವರ್ಷಗಳು ಸಂದಿವೆ. ಇದರ ಸ್ಮರಣಾರ್ಥವಾಗಿ 75 ರೂಪಾಯಿ ಮುಖಬೆಲೆಯ ನಾಣ್ಯವನ್ನು ಹೊರತರುವುದಾಗಿ ಕೇಂದ್ರ ಸರ್ಕಾರ
ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮರಣಾ 75 ರೂಪಾಯಿ ಮುಖಬೆಲೆಯ ನಾಣ್ಯ
ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮರಣಾ 75 ರೂಪಾಯಿ ಮುಖಬೆಲೆಯ ನಾಣ್ಯ
ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿ 75 ವರ್ಷಗಳು ಸಂದಿವೆ. ಇದರ ಸ್ಮರಣಾರ್ಥವಾಗಿ 75 ರೂಪಾಯಿ ಮುಖಬೆಲೆಯ ನಾಣ್ಯವನ್ನು ಹೊರತರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. 
ಪೋರ್ಟ್ ಬ್ಲೈರ್ (ಅಂಡಮಾನ್ ಮತ್ತು ನಿಕೋಬಾರ್ ಐಸ್‌ಲ್ಯಾಂಡ್)  ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸರು 1943 ರ ಡಿಸೆಂಬರ್ 30 ರಂದು ಮೊದಲ ಬಾರಿಗೆ ತ್ರಿವರ್ಣ ಧ್ವಜಾರೋಹಣ ಮಾಡಿದ್ದರು. ಈ ಘಟನೆಗೆ 75 ವರ್ಶಗಳು ಸಂದಿದ್ದು ಈ ಹಿನ್ನೆಲೆಯಲ್ಲಿ 75 ರೂಪಾಯಿ ಮುಖಬೆಲೆಯ ನಾಣ್ಯವನ್ನು ಹೊರತರಲಾಗುತ್ತಿದೆ, 75 ರೂಪಾಯಿ ಮುಖಬೆಲೆ ನಾಣ್ಯ ಹೊರತರುವುದಕ್ಕಾಗಿ ಈಗಾಗಲೇ ಹಣಕಾಸು ಇಲಾಖೆ ಅಧಿಸೂಚನೆ ಹೊರಡಿಸಿದೆ
ಸೆಲ್ಯುಲರ್ ಜೈಲ್ ನ ಮುಂಭಾಗದಲ್ಲಿ ನೇತಾಜಿ ತ್ರಿವರ್ಣ ಧ್ವಜಕ್ಕೆ ಸೆಲ್ಯೂಟ್ ಮಾಡುತ್ತಿರುವ ಚಿತ್ರ ನಾಣ್ಯದ ಮೇಲೆ ಇರಲಿದೆ. ಅ.21 ರಂದು ರ್ಪಧಾನಿ ನರೇಂದ್ರ ಮೋದಿ ಆಜಾದ್ ಹಿಂದ್ ಸರ್ಕಾರ ರಚನೆಯಾದ 75 ನೇ ವರ್ಷಾಚರಣೆ ಅಂಗವಾಗಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com