ತೃಪ್ತಿ ದೇಸಾಯಿ ಅವರು ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ವಿಮಾನ ನಿಲ್ದಾಣದಲ್ಲೇ ಅವರು ತಮ್ಮ ಬೆಳಗಿನ ಉಪಹಾರ ಸೇವಿಸಿದ್ದಾರೆ. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ತೃಪ್ತಿ ದೇಸಾಯಿ, ಅಯ್ಯಪ್ಪನ ದರ್ಶನ ಪಡೆಯದ ಹೊರತು ತಾವು ಕೇರಳದಿಂದ ತೆರಳವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಪ್ರತಿಭಟನೆಯಿಂದ ನಮ್ಮನ್ನು ಭಯಪಡಿಸಲು ಸಾಧ್ಯವಿಲ್ಲ. ನಾವು ಈಗಾಗಲೇ ಭದ್ರತೆ ಕೋರಿ ಕೇರಳ ಪೊಲೀಸರಿಗೆ ಮನವಿ ಮಾಡಿದ್ದು, ವಿಐಪಿ ಭದ್ರತೆ ನೀಡುವಂತೆ ಮನವಿ ಮಾಜಿಕೊಂಡಿದ್ದೇವೆ. ಈ ಬಗ್ಗೆ ಕೊಚ್ಚಿ ಪೊಲೀಸ್ ನಿರ್ದೇಶಕರಿಗೆ ಕರೆ ಮಾಡಿ ಮನವಿ ಮಾಡಲಾಗಿದ್ದು, ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ದರ್ಶನಕ್ಕೆ ಆಗಮಿಸುವ ಮಹಿಳೆಯರಿಗೆ ಭದ್ರತೆ ನೀಡುವಂತೆ ಸ್ವತಃ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಇಲ್ಲಿನ ಪೊಲೀಸರು ಭದ್ರತೆ ಕುರಿತು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಫೇಸ್ ಬುಕ್ ನಲ್ಲಿಯೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.