ತನಿಖೆ ಶುರು ಮಾಡಿದ ಪೊಲೀಸರು ಮೌನಿಕಾಳ ಮೊಬೈಲ್ ಫೋನ್ ಟ್ರಾಕ್ ಮಾಡುವ ಮೂಲಕ ಆಕೆಯನ್ನು ಪತ್ತೆ ಹಚ್ಚಿದ್ದರು. ವಿಚಾರಣೆ ನಡೆಸಿದಾಗ ಮೌನಿಕಾ ಅದಾಗಲೇ ಆರು ಮದುವೆಯಾಗಿದ್ದು ಎಲ್ಲರ ಜತೆ ಸಂಸಾರ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾಗಿ ತಿಳಿಸಿದ್ದಾಳೆ. ಈ ಮಾತು ಕೇಳಿದ ರಾಮಕೃಷ್ಣಾರೆಡ್ಡಿ ದಂಗಾಗಿದ್ದಾರೆ. ಒಟ್ಟಿನಲ್ಲಿ ಸುಂದರವಾಗಿದ್ದ ಯುವತಿಯನ್ನು ವಿವಾಹವಾಗಿ ಸುಂದರ ಬದುಕು ನಡೆಸಬೇಕೆಂದಿದ್ದ ರಾಮಕೃಷ್ಣಾರಿಗೆ ಬರಸಿಡಿಲು ಬಡಿದಂಗಾಗಿದೆ.