ಮುಂಬೈ: ತನ್ನ ಹೆತ್ತ ತಾಯಿಯನ್ನು ಹತ್ಯೆ ಮಾಡಿದ ಆರೋಪ ಮೇಲೆ ಮಾಡೆಲ್ ಒಬ್ಬರನ್ನು ಭಾನುವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ..ಬಂಧಿತ ಆರೋಪಿ ಮಾಡೆಲ್ ಲಕ್ಷ್ಯ ಸಿಂಗ್ ಎಂದು ಗುರುತಿಸಲಾಗಿದ್ದು, ಶನಿವಾರ ತನ್ನ ಫ್ಯಾಷನ್ ಡಿಸೈನರ್ ತಾಯಿ ಸುನಿತಾ ಸಿಂಗ್ ಅವರನ್ನು ಹತ್ಯೆ ಮಾಡಿದ್ದಾನೆ..ಸುನಿತಾ ಅವರ ತಲೆ ಮತ್ತು ಬೆನ್ನಿನ ಮೇಲೆ ಹಲವು ಗಾಯಗಳಾಗಿವೆ ಎಂದು ಒಶಿವಾರ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಶೈಲೇಶ್ ಪಸಲವಾಡ್ ಅವರು ತಿಳಿಸಿದ್ದಾರೆ..ಈ ಸಂಬಂಧ ಪಾಪಿ ಪುತ್ರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ..ಹೆತ್ತ ತಾಯಿಯ ಹತ್ಯೆ ಕಾರಣ ಇನ್ನೂ ತಿಳಿದು ಬಂದಿಲ್ಲ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics