

ದೆಹಲಿ : ಹೆಚ್ಚುವರಿ ದರವನ್ನು ಕೇಳಿದ ಆಟ್ರೋ ಡ್ರೈವರ್ ನನ್ನು ಪ್ರಯಾಣಿಕರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ರಾತ್ರಿ ವೇಳೆ ಸೇವೆ ಹಾಗೂ ಹೆಚ್ಚುವರಿ ಪ್ರಯಾಣಿಕರಿದ್ದ ಕಾರಣ ಆಟೋ ಡ್ರೈವರ್ ಹೆಚ್ಚುವರಿ ಹಣ ನೀಡುವಂತೆ ಕೇಳಿದ್ದಾನೆ. ಇದರಿಂದ ಕುಪಿತಗೊಂಡ ಪ್ರಯಾಣಿಕರು ಚಾಕುವಿನಿಂದ 26 ವರ್ಷದ ಆಟೋ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದು, ಕೊಂದೇ ಬಿಟ್ಟಿದ್ದಾರೆ.