ಹೊಸ ಡಿಎಲ್‌ನಲ್ಲಿ ಕೇಂದ್ರ, ರಾಜ್ಯಸರ್ಕಾರಗಳ ಲಾಂಛನ, ಅದನ್ನು ನೀಡಿದ ಪ್ರಾದೇಶಿಕ ಸಾರಿಗೆ ಕಚೇರಿ ವಿವರ, ವಿತರಿಸಿದ ದಿನಾಂಕ ಮತ್ತು ಮಾನ್ಯತೆ ಹೊಂದಿರುವ ಅವಧಿ, ವಾಹನ ಚಾಲಕರ ರಕ್ತದ ಗುಂಪು, ಅಂಗಾಂಗ ದಾನಕ್ಕೆ ಸಮ್ಮತಿ ಇರುವ ಕುರಿತು ಮಾಹಿತಿ, ಅಪಘಾತದ ಸಂದರ್ಭದಲ್ಲಿ ತುರ್ತಾಗಿ ಕರೆ ಮಾಡಬಹುದಾದ ದೂರವಾಣಿ ಸಂಖ್ಯೆ ದಾಖಲಾಗಿರುತ್ತದೆ. ಆರ್ಸಿಯಲ್ಲೂ ಈ ಮಾಹಿತಿಗಳ ಜತೆಗೆ ವಾಹನ ವಾಣಿಜ್ಯ ಬಳಕೆಯದ್ದೋ ಅಥವಾ ವೈಯಕ್ತಿಕ ಬಳಕೆಯದ್ದೋ, ವಾಹನದ ಚಾಸಿ ಹಾಗೂ ಇಂಜಿನ್ ಸಂಖ್ಯೆ, ಮಾಲಿನ್ಯ ನಿಯಮ ಪಾಲನೆಯ ವಿವರ ಇರುತ್ತದೆ.