ಗೋವಾದಲ್ಲಿ ಸರ್ಕಾರ ಮಾಡುವ ಕಾಂಗ್ರೆಸ್ ಕನಸು ಭಗ್ನ; 2 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವ ಸಾಧ್ಯತೆ!
ಗೋವಾ ಕಾಂಗ್ರೆಸ್ ಶಾಸಕರಾದ ದಯಾನಂದ್ ಸೊಪ್ಟೆ ಮತ್ತು ಸುಭಾಶ್ ಶಿರೋಡ್ಕರ್ ಕಳೆದ ರಾತ್ರಿ ದೆಹಲಿಗೆ ತೆರಳಿದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗುತ್ತಿದ್ದು ಇದು ಇದೀಗ ತೀವ್ರ ಕುತೂಹಲ ಕೆರಳಿಸಿದೆ...
ಪಣಜಿ: ಗೋವಾ ಕಾಂಗ್ರೆಸ್ ಶಾಸಕರಾದ ದಯಾನಂದ್ ಸೊಪ್ಟೆ ಮತ್ತು ಸುಭಾಶ್ ಶಿರೋಡ್ಕರ್ ಕಳೆದ ರಾತ್ರಿ ದೆಹಲಿಗೆ ತೆರಳಿದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗುತ್ತಿದ್ದು ಇದು ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಶಾಸಕರಿಬ್ಬರು ದಿಢೀರ್ ಅಂತಾ ದೆಹಲಿಗೆ ದೌಡಾಯಿಸಿರುವುದು ಅವರಿಬ್ಬರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಮಂಗಳವಾರ ಇಬ್ಬರು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
2017ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಬಿಜೆಪಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೆಕರ್ ಅವರನ್ನು ದಯಾನಂದ್ ಸೊಪ್ಟೆ ಪರಾಭವಗೊಳಿಸಿದ್ದರು. ಇಂತಹ ಸೊಪ್ಟೆ ಅವರೇ ಇದೀಗ ಬಿಜೆಪಿ ಸೇರಲಿದ್ದು ಇದು ಗೋವಾದಲ್ಲಿ ಕಾಂಗ್ರೆಸ್ ಗೆ ದೊಡ್ಡ ಪೆಟ್ಟು ನೀಡಲಿದೆ.