ಅಪಾಯಕಾರಿ ಸೆಲ್ಫಿ ತೆಗೆದುಕೊಳ್ಳಲು ಜೀವವನ್ನೇ ಪಣಕ್ಕಿಟ್ಟ 'ಮಹಾ' ಸಿಎಂ ಪತ್ನಿ ನಡೆಗೆ ಟೀಕೆ, ವಿಡಿಯೋ ವೈರಲ್!

ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬಂತೆ ಸುರಕ್ಷತಾ ಅಧಿಕಾರಗಳ ಮಾತನ್ನು ಕೇಳದೆ ಅಪಾಯಕಾರಿ ಸೆಲ್ಫಿಯನ್ನು ತೆಗೆದುಕೊಳ್ಳಲು ಮಹಾರಾಷ್ಟ್ರ ಸಿಎಂ ಪತ್ನಿ...
ಅಮೃತ
ಅಮೃತ
ನವದೆಹಲಿ: ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬಂತೆ ಸುರಕ್ಷತಾ ಅಧಿಕಾರಗಳ ಮಾತನ್ನು ಕೇಳದೆ ಅಪಾಯಕಾರಿ ಸೆಲ್ಫಿಯನ್ನು ತೆಗೆದುಕೊಳ್ಳಲು ಮಹಾರಾಷ್ಟ್ರ ಸಿಎಂ ಪತ್ನಿ ಮುಂದಾಗಿದ್ದು ಸಿಎಂ ಪತ್ನಿಯ ಈ ನಡೆ ಇದೀಗ ಟೀಕೆಗೆ ಗುರಿಯಾಗಿದೆ. 
 ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜೀವವನ್ನೇ ಪಣಕ್ಕೆ ಒಡ್ಡಿದ್ದರು. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಮುಂಬೈ-ಗೋವಾ ಕ್ರೂಝ್ ಸೇವೆ(ಬೋಟ್ ಸೇವೆ)ಯನ್ನು ಉದ್ಘಾಟಿಸಿದ ಅಮೃತ ಫಡ್ನಾವಿಸ್ ಅವರು ನಂತರ ರಕ್ಷಣಾ ಅಧಿಕಾರಿಗಳ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಸುರಕ್ಷಾ ನಿಯಮವನ್ನು ಮುರಿದು ಅಪಾಯದ ಸೆಲ್ಫಿ ತೆಗೆದುಕೊಂಡಿದ್ದಾರೆ. 
ಬೋಟ್ ನ ತುದಿಗೆ ಹೋಗುವುದು ಹೆಚ್ಚು ಅಪಾಯಕಾರಿ. ಬೋಟ್ ತೇಲಾಡುತ್ತಿರುವ ವೇಳೆ ಆಯಾತಪ್ಪಿ ಬೀಳುವ ಸಾಧ್ಯತೆ ಕೂಡ ಹೆಚ್ಚಿದೆ ಎಂದು ಎಚ್ಚರಿಕೆಯನ್ನು ಸುರಕ್ಷತಾ ಅಧಿಕಾರಿಗಳು ನೀಡಿದ್ದರೂ ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದೇ ಸೆಲ್ಫಿ ತೆಗೆದುಕೊಳ್ಳುವಲ್ಲಿ ಅಮೃತ ಮಗ್ನರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com