ಊಟಿ: ಹನಿಮೂನ್ ಟ್ರಿಪ್ ಗಾಗಿ ಇಡೀ ರೈಲು ಬುಕ್ ಮಾಡಿದ ಬ್ರಿಟಿಷ್ ದಂಪತಿ!

ಬ್ರಿಟಿಷ್ ನವ ದಂಪತಿಗಳು ತಮಿಳುನಾಡಿನ ಮೆಟ್ಟುಪಾಳ್ಯಂನಿಂದ ಊಟಿ ನಡುವೆ ಸಂಚರಿಸುವ...
ಬ್ರಿಟಿಷ್ ದಂಪತಿ
ಬ್ರಿಟಿಷ್ ದಂಪತಿ
ಕೊಯಮತ್ತೂರು: ಬ್ರಿಟಿಷ್ ನವ ದಂಪತಿಗಳು ತಮಿಳುನಾಡಿನ ಮೆಟ್ಟುಪಾಳ್ಯಂನಿಂದ ಊಟಿ ನಡುವೆ ಸಂಚರಿಸುವ ಟಾಯ್‌ ಟ್ರೈನ್‌ ನ ಎಲ್ಲಾ ಟಿಕೆಟ್ ಗಳನ್ನು ಬುಕ್ ಮಾಡುವ ಮೂಲಕ ನೀಲಗಿರಿ ಬೆಟ್ಟಗಳ ನಡುವೆ ತಮ್ಮ ಹನಿಮೂನ್‌ ಅನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಊಟಿಯಲ್ಲಿನ ಈ ಟಾಯ್‌ ಟ್ರೈನ್‌ ವಿಶ್ವಪ್ರಸಿದ್ಧವಾಗಿದ್ದು, ಇದರಲ್ಲಿ ಟಿಕೆಟ್‌ ಖರೀದಿಯೂ ಬಹುತೇಕ ಸಂದರ್ಭ ಸಾಹಸದ ಕೆಲಸ. ಹೀಗಾಗಿ ಬ್ರಿಟಿಷ್ ಜೋಡಿ ಆನ್ ಲೈನ್ ಮೂಲಕ ಇಡೀ ರೈಲನ್ನು ಬುಕ್ ಮಾಡುವ ಮೂಲಕ ಹನಿಮೂನ್‌ ಅನ್ನು ವಿಶಿಷ್ಟವಾಗಿ ಆಚರಿಸಿದೆ. 
ಗ್ರಹಾಂ ವಿಲಿಯಂ ಲಿನ್‌(30) ಹಾಗೂ ಸಿಲ್ವಿಯಾ ಪ್ಲಾಸಿಕ್‌(27) ದಂಪತಿ ಸುಮಾರು 3 ಲಕ್ಷ ರು. ಪಾವತಿಸಿ ಇಡೀ ರೈಲನ್ನೇ ಬುಕ್‌ ಮಾಡಿದ್ದರು. ಐಆರ್‌ಸಿಟಿಸಿ ಆರಂಭಿಸಿರುವ ಹೊಸ ಯೋಜನೆ ಅನ್ವಯ ಯಾರೂ ಬೇಕಾದರೂ, ಪೂರ್ಣ ಶುಲ್ಕ ಪಾವತಿಸಿ ಅಷ್ಟೂಟಿಕೆಟ್‌ ಖರೀದಿಸಿ ಅದರಲ್ಲಿ ಪ್ರಯಾಣಿಸಬಹುದಾಗಿದೆ.
ಬ್ರಿಟಿಷ್‌ ನಂವ ದಂಪತಿ ಹೊತ್ತ ರೈಲು ಬೆಳಗ್ಗೆ 9.10 ನಿಮಿಷಕ್ಕೆ ಮೆಟ್ಟುಪಾಳ್ಯಂನಿಂದ ಹೊರಟು 48 ಕಿ.ಮೀ ದೂರದ ಊಟಿಯನ್ನು ಮಧ್ಯಾಹ್ನ 2.40ಕ್ಕೆ ತಲುಪಿತು. ಈ ವೇಳೆ ಜೋಡಿಯನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com