ನವದೆಹಲಿ: ಎಂದಿನಂತೆಯೇ ಸೋಮವಾರ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ.86.56 (31 ಪೈಸೆ ಏರಿಕೆ) ಹಾಗೂ ಡೀಸೆಲ್ ದರ 75.54 (44 ಪೈಸೆ) ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ ರೂ. 79.15 (31 ಪೈಸೆ ಏರಿಕೆ), ಡೀಸೆಲ್ ದರ ರೂ. 71.15 (39 ಪೈಸೆ) ಏರಿಕೆಯಾಗಿದೆ.
ಆಗಸ್ಟ್ 16ರ ನಂತರ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ. ಡಾಲರ್ ಎದುರು ಭಾರತದ ರುಪಾಯಿ ಅಪಮೌಲ್ಯವಾಗಿರುವ ಹಿನ್ನಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಪೆಟ್ರೋಲ್ ದರ ಏರಿಕೆ ಕುರಿತಂತೆ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಇದು ತಾತ್ಕಾಲಿಕ ಮಾತ್ರ ಎಂದು ಹೇಳಿದ್ದರು.