ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಭಾರತೀಯ ವಾಯುಸೇನೆ ಉಪಾಧ್ಯಕ್ಷ ಮಾರ್ಷಲ್ ಎಸ್.ಬಿ.ಡಿಯೋ ಅವರು, ರಫೇಲ್ ವಿಮಾನ ಅದ್ಭುತ ಯುದ್ಧ ವಿಮಾನವಾಗಿದ್ದು, ಇದು ಭಾರತಕ್ಕೆ ಅಭೂತಪೂರ್ವ ಯುದ್ಧ ಸಾಮರ್ಥ್ಯವನ್ನು ನೀಡುತ್ತದೆ. ಪ್ರಸ್ತುತ ರಫೇಲ್ ಒಪ್ಪಂದ ಕುರಿತು ಟೀಕೆ ಮಾಡುತ್ತಿರುವವರು ಆಳದಲ್ಲಿ ನಿಂತು ಅದರ ನಿಮಯ ಹಾಗೂ ಸಂಗ್ರಹಣ ವಿಧಾನಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.