ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಮೇಲ್ಸೇತುವೆ ಕುಸಿತ!

ಇತ್ತೀಚೆಗಷ್ಟೇ ಕೋಲ್ಕತಾದ ಮಜ್ಹೆರ್ಹಾತ್ ಮೇಲ್ಸೇತುವೆ ಕುಸಿದು ಮೂರು ಜನ ಸಾವನ್ನಪ್ಪಿದ್ದರು. ಈ ಪ್ರಕರಣ ಇನ್ನೂ ಸುದ್ದಿಯಾಗುತ್ತಿರುವಾಗಲೇ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಮೇಲ್ಸೇತುವೆ ಕುಸಿದಿದೆ.
ಕುಸಿದ ಸೇತುವೆ
ಕುಸಿದ ಸೇತುವೆ
ಕೋಲ್ಕತಾ: ಇತ್ತೀಚೆಗಷ್ಟೇ ಕೋಲ್ಕತಾದ ಮಜ್ಹೆರ್ಹಾತ್ ಮೇಲ್ಸೇತುವೆ ಕುಸಿದು ಮೂರು ಜನ ಸಾವನ್ನಪ್ಪಿದ್ದರು. ಈ ಪ್ರಕರಣ ಇನ್ನೂ ಸುದ್ದಿಯಾಗುತ್ತಿರುವಾಗಲೇ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಮೇಲ್ಸೇತುವೆ ಕುಸಿದಿದೆ. 
ಪಶ್ಚಿಮ ಬಂಗಾಳದ ಸಿಲ್ಗುರಿಯ ಫನ್ಸಿಡೆವಾದಲ್ಲಿ ಮೇಲ್ಸೇತುವೆಯೊಂದು ಕುಸಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಓರ್ವ ಟ್ರಕ್ ಚಾಲಕ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 
ಸಿಲ್ಗುರಿಯ ಮನ್ ಗಂಜ್ ಪ್ರದೇಶದಲ್ಲಿರುವ ಮೇಲ್ಸೇತುವೆ ಕುಸಿದಿದೆ. ಮೇಲ್ಸೇತುವೆ ಮೇಲೆ ಸರಕು ಸಾಗಾಣಿಕಾ ಟ್ರಕ್ ವೊಂದು ಸಾಗುತ್ತಿದ್ದಾಗ ಮೇಲ್ಸೇತುವೆಯ ಭಾಗವೊಂದು ಕುಸಿದಿದೆ. ಪರಿಣಾಮ ಟ್ರಕ್ ಚಲಾಯಿಸುತ್ತಿದ್ದ ಚಾಲಕ ಗಾಯಗೊಂಡಿದ್ದಾ. ಗಾಯಾಳುವನ್ನು ಸಿಲ್ಗುರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಪ್ರದೇಶಕ್ಕೆ ಸಚಿವ ರವೀಂದ್ರನಾಥ್ ಘೋಷ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com