ಪಿಎನ್'ಬಿ ಹಗರಣ: ಇಡಿ ಆರೋಪಗಳೆಲ್ಲಾ ಆಧಾರ ರಹಿತ ಎಂದ ಮೆಹುಲ್ ಚೋಕ್ಸಿ

ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ಮಾಡಿರುವ ಆರೋಪಗೆಲ್ಲವೂ ಸುಳ್ಳು ಹಾಗೂ ಆಧಾರ ರಹಿತ ಎಂದು ಪಿಎನ್'ಬಿ ಹಗರಣದ ಆರೋಪಿ ಮೆಹುಲ್ ಚೋಕ್ಸಿ ಮಂಗಳವಾರ ಹೇಳಿದ್ದಾರೆ...
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ
ನವದೆಹಲಿ: ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ಮಾಡಿರುವ ಆರೋಪಗೆಲ್ಲವೂ ಸುಳ್ಳು ಹಾಗೂ ಆಧಾರ ರಹಿತ ಎಂದು ಪಿಎನ್'ಬಿ ಹಗರಣದ ಆರೋಪಿ ಮೆಹುಲ್ ಚೋಕ್ಸಿ ಮಂಗಳವಾರ ಹೇಳಿದ್ದಾರೆ. 
ಈ ಕುರಿತಂತೆ ಎಎನ್ಐ ಸುದ್ದಿಸಂಸ್ಥೆಗೆ ಹೇಳಿಕೆ ನೀಡಿದ್ದು, ಮೆಹುಲ್ ಚೋಕ್ಸಿ ನೀಡಿರುವ ಹೇಳಿಕೆಯ ವಿಡಿಯೋವನ್ನು ಎಎನ್ಐ ಸುದ್ಧಿ ಸಂಸ್ಥೆ ದಾಖಲು ಮಾಡಿಕೊಂಡಿದೆ. 
ವಿಡಿಯೋದಲ್ಲಿ ಮಾತನಾಡಿರುವ ಚೋಕ್ಸಿ, ಜಾರಿ ನಿರ್ದೇಶನಾಲಯ ಮಾಡಿರುವ ಆರೋಪಗಳೆಲ್ಲವೂ ಸುಳ್ಳಾಗಿದ್ದು, ಆರೋಪದಲ್ಲಿ ಸತ್ಯಾಂಶಗಳೇ ಇಲ್ಲ. ಕಾನೂನು ಬಾಹಿರವಾಗಿ ನನ್ನ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ. 
ಫೆ.16 ರಂದು ಭಾರತ ನನ್ನ ಪಾಸ್'ಪೋರ್ಟ್'ನ್ನು ರದ್ದು ಮಾಡಿದೆ. ಫೆ.20 ರಂದು ನನಗೆ ಪಾಸ್'ಪೋರ್ಟ್ ತಡೆಹಿಡಿರುವ ಕುರಿತು ಅಧಿಕಾರಿಗಳು ಇಮೇಲ್ ಮಾಡಿದ್ದಾರೆ. ಅಲ್ಲದೆ. ದೇಶದ ಭದ್ರತೆಗೆ ತೊಡಕಾಗುವ ಸಂಬಂಧ ಪಾಸ್'ಪೋರ್ಟ್ ತಡೆಹಿಡಿದಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮುಂಬೈ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಗೆ ಸ್ಪಷ್ಟೀಕರಣ ನೀಡುವಂತೆ ಮನವಿ ಮಾಡಿಕೊಂಡಿದ್ದರೂ ಯಾವುದೇ ರೀತಿಯ ಉತ್ತರ ಬಂದಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com