ಇನ್ನು ತೆಲಂಗಾಣ, ಪಶ್ಚಿಮ ಬಂಗಾಳ, ಜಾರ್ಖಂಡ್, ಚತ್ತೀಸ್ ಘಡ, ವಿದರ್ಭ, ರಾಯಲಸೀಮಾ, ಪೂರ್ವ ಮಧ್ಯಪ್ರದೇಶ, ಪಶ್ಚಿಮ ಮಧ್ಯಪ್ರದೇಶ, ಪೂರ್ವ ರಾಜಸ್ಥಾನದಲ್ಲಿ ಮಳೆಯಾಗಲಿದೆ. ಅದರಲ್ಲೂ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಗುರುವಾರ ಸೈಕ್ಲೋನ್ ಹೊಡೆತ ತೀವ್ರವಾಗಿದ್ದ ಪರಿಣಾಮ ಅಲ್ಲಿನ ಜನ ಭೀತಿಗೊಳಗಾಗಿದ್ದಾರೆ. ದಕ್ಷಿಣ ಒಡಿಶಾ, ಉತ್ತರ ಆಂಧ್ರಪ್ರದೇಶ, ಕಾಳಿಂಗಪಟ್ಟಣ, ಪುರಿ, ಗೋಪಾಲಪುರದಲ್ಲಿಯೂ ಇಂದು ಮತ್ತು ನಾಳೆ ಭಾರಿ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.