ದೇಶ

ಕಂಪನಿಯಲ್ಲಿ 25 ವರ್ಷ ಪೂರೈಸಿದ ನೌಕರರಿಗೆ ರೂ.1 ಕೋಟಿ ಎಸ್'ಯುವಿ ಕಾರು ನೀಡಿದ ವಜ್ರದ ವ್ಯಾಪಾರಿ ಧೋಲಾಕಿಯಾ!

ದೀಪಾವಳಿ ಹಬ್ಬಕ್ಕೆ ನ1ಕರರಿಗೆ ಕಾರು, ಮನೆ, ಒಡವೆಗಳನ್ನು ಉಡುಗೊರೆಯಾಗಿ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ವಜ್ರಗಳ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರು ಇದೀಗ ಮತ್ತೆ ತಮ್ಮ ನೌಕರರಿಗೆ ದುಬಾರಿ ಉಡುಗೊರೆಗಳನ್ನು...

ಕಂಪನಿಯಲ್ಲಿ 25 ವರ್ಷ ಪೂರೈಸಿದ ನೌಕರರಿಗೆ ರೂ.1 ಕೋಟಿ ಎಸ್'ಯುವಿ ಕಾರು ನೀಡಿದ ವಜ್ರದ ವ್ಯಾಪಾರಿ ಧೋಲಾಕಿಯಾ!
ವಜ್ರದ ವ್ಯಾಪಾರಿ ಧೋಲಾಕಿಯಾ
Published On :
ಸೂರತ್: ದೀಪಾವಳಿ ಹಬ್ಬಕ್ಕೆ ನೌಕರರಿಗೆ ಕಾರು, ಮನೆ, ಒಡವೆಗಳನ್ನು ಉಡುಗೊರೆಯಾಗಿ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ವಜ್ರಗಳ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರು ಇದೀಗ ಮತ್ತೆ ತಮ್ಮ ನೌಕರರಿಗೆ ದುಬಾರಿ ಉಡುಗೊರೆಗಳನ್ನು ನೀಡುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ. 
ಸೂರತ್ ಮೂಲಕ ವಜ್ರದ ವ್ಯಾಪಾರಿಯಾಗಿರುವ ಸಾವ್ಜಿಯವರು, ಕಂಪನಿಯಲ್ಲಿ 25 ವರ್ಷ ಪೂರೈಸಿದ ನೌಕರರಿಗೆ ರೂ.1 ಕೋಟಿ ಬೆಲೆ ಬಾಳುವ ಮರ್ಸಿಡಿಸ್ ಬೆಂಜ್ ಎಸ್'ಯುವಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. 
ಕಂಪನಿಯಲ್ಲಿ ಕಳೆದ 25 ವರ್ಷಗಳಿಂದ ಹಿರಿಯ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಮೂವರಿಗೆ ಈ ದುಬಾರಿ ಕಾರುಗಳನ್ನು ಸಾವ್ಜಿಯವರು ಉಡುಗೊರೆಯಾಗಿ ನೀಡಿದ್ದಾರೆ. 
ನೀಲೇಶ್ ಜಡಾ (40), ಮುಖೇಶ್ ಚಂದ್ಪರ (38) ಮಹೇಶ್ ಚಂದ್ಪರ (43) ಅವರು ಈ ದುಬಾರಿ ಉಡುಗೊರೆಗಳನ್ನು ಪಡೆದುಕೊಂಡಿದ್ದಾರೆ. 
ಕಂಪನಿಯ ರಜತ ಮಹೋತ್ಸವ ಸೂರತ್ ನಲ್ಲಿ ನಡೆದಿದ್ದು, ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮೂವರಿಗೆ ಉಡುಗೊರೆಗಳನ್ನು ನೀಡಲಾಗಿದೆ. 
ಅವರವರ ಕಾರ್ಯವೈಖರಿಯ ಆಧಾರದ ಮೇರೆಗೆ ನೌಕರರಿಗೆ ಉಡುಗೊರೆಗಲನ್ನು ನೀಡಲಾಗಿದೆ. ಪ್ರಸ್ತುತ ಉಡುಗೊರೆ ಪಡೆದುಕೊಂಡಿರುವ ಮೂವರೂ ನೌಕರರು ಯುವಕರಾಗಿದ್ದಾಗಲೇ ಕಂಪನಿಗೆ ಸೇರ್ಪಡೆಗೊಂಡಿದ್ದರು ಎಂದು ಸಾವ್ಜಿಯವರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.