ಕಳ್ಳತನ ಮಾಡಲು ಸಿಗದ ಹಣ: ಅಂಗಡಿ ಮಾಲೀಕನಿಗೆ ಫೀಡ್ ಬ್ಯಾಕ್ ನೋಟ್ ಬರೆದಿಟ್ಟ ಖತರ್ನಾಕ್!

ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳ ಅಲ್ಲಿ, ಕದಿಯಲು ಹಣ ಸಿಗದ ಕಾರಣ, ಅಂಗಡಿ ಮಾಲೀಕನಿಗೆ ಚೀಟಿಯೊಂದನ್ನು ಬರೆದಿಟ್ಟು ಹೋಗಿದ್ದಾನೆ...
ಕಳ್ಳ ಬರೆದ ಫೀಡ್ ಬ್ಯಾಕ್ ನೋಟ್
ಕಳ್ಳ ಬರೆದ ಫೀಡ್ ಬ್ಯಾಕ್ ನೋಟ್
Updated on
ಕುಡ್ಡಲೂರು: ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳ ಅಲ್ಲಿ, ಕದಿಯಲು ಹಣ ಸಿಗದ ಕಾರಣ, ಅಂಗಡಿ ಮಾಲೀಕನಿಗೆ ಚೀಟಿಯೊಂದನ್ನು ಬರೆದಿಟ್ಟು ಹೋಗಿದ್ದಾನೆ.
ನೇಯ್ವೆಲ್ಲಿಯಲ್ಲಿ ವಾಸವಾಗಿರುವ 65 ವರ್ಷದ ಜಯರಾಜ್, ಸಣ್ಣ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು, ಈ ಅಂಗಡಿಗೆ ನುಗ್ಗಿದ ಕಳ್ಳ ಅಲ್ಲಿ ಹಣ ಕದಿಯಲು ನೋಡಿದ್ದಾನೆ, ಆದರೆ ಅಲ್ಲಿ ಹಣ ಸಿಗಲಿಲ್ಲ, ಹೀಗಾಗಿ ಬೇಸರಗೊಂಡು ಪತ್ರವೊಂದನ್ನು ಬರೆದಿದ್ದಾನೆ, ನನ್ನ ಜೀವವನ್ನು ಪಣಕ್ಕಿಟ್ಟು ನಿನ್ನ ಅಂಗಡಿ ಮುರಿದು ಬರಲು ರಿಸ್ಕ್ ತೆಗೆದುಕೊಂಡೆ, ಆದರೆ ಒಳಗೆ ಬಂದು ನೋಡಿದರೇ ಒಂದು ಬಿಡಿದಗಾಸು ಸಿಗಲಿಲ್ಲ, ಹೀಗಾಗಿ ಈ ಕೋತಿ ಚೇಷ್ಟೆ ಮಾಡಿದ್ದೇನೆ ಎಂದು ಬರೆದಿದ್ದಾನೆ.
ಯಾವುದೇ ಮನೆ ಅಥವಾ ಅಂಗಡಿ ಲೂಟಿ ಮಾಡುವಾಗ ನಾನು ಎಷ್ಟು ಎಂಜಾಯ್ ಮಾಡುತ್ತೇನೆ ಎಂಬುದನ್ನು ಬರೆದಿಟ್ಟು ಹೋಗಿದ್ದಾನೆ. ಜಯರಾಜ್ ಅಂಗಡಿ ಬಾಗಿಲು ತೆಗೆದು ಒಳಬಂದಾಗ ಸಾಮಾನುಗಳೆಲ್ಲಾ ಚಲ್ಲಾಪಿಲ್ಲಿ ಮಾಡಿದ್ದೇನೆ ಎಂದು ಬರೆದಿದ್ದಾನೆ, ಈ ಸಂಬಂಧ ಜಯರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೇಲ್ಚಾವಣಿ ಮುರಿದು ಕಳ್ಳ ಒಳಗೆ ನುಗ್ಗಿದ್ದಾನೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com