ಅಂದು ವಾರಂಗಲ್ ಆ್ಯಸಿಡ್ ದಾಳಿಕೋರರಿಗೆ, ಇಂದು ಹತ್ಯಾಚಾರಿಗಳಿಗೆ ಗುಂಡು: ಆಯುಕ್ತ ಸಜ್ಜನ್‌ ಕಾರ್ಯಕ್ಕೆ ಪ್ರಶಂಸೆ

ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ ತೆಲಂಗಾಣ ಪೊಲೀಸರ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ವಿಶ್ವನಾಥ್ ಸಜ್ಜನರ್
ವಿಶ್ವನಾಥ್ ಸಜ್ಜನರ್
Updated on

ಹುಬ್ಬಳ್ಳಿ: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ ತೆಲಂಗಾಣ ಪೊಲೀಸರ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಇನ್ನು ಎನ್ಕೌಂಟರ್ ತಂಡದ ನೇತೃತ್ವ ವಹಿಸಿದವರು ಕರ್ನಾಟಕದ ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್. ಇದೀಗ ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಜ್ಜನ್‌ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. ವಿಶ್ವನಾಥ್ ಸಜ್ಜನರ್  ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದು, ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ವಿಶ್ವನಾಥ್ ಸಜ್ಜನರ್ ವಾರಂಗಲ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಅವರ ಕಾರ್ಯ ವ್ಯಾಪ್ತಿಯಲ್ಲಿ ಆಸಿಡ್ ದಾಳಿ ನಡೆದಿದ್ದು, ಆಗಲೂ ಆರೋಪಿಯನ್ನು ಅವರು ಎನ್ಕೌಂಟರ್ ಮೂಲಕ ಹತ್ಯೆಗೈದಿದ್ದರು. ಇದರಿಂದ ತೆಲಂಗಾಣದಲ್ಲಿ ಆ್ಯಸಿಡ್ ದಾಳಿ ಪ್ರಕರಣ ಇಳಿಮುಖವಾಗಿತ್ತು.

ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಇಂದು ಬೆಳಗ್ಗಿನ ಜಾವ ಆರೋಪಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದ 100 ಮೀಟರ್ ವ್ಯಾಪ್ತಿಯಲ್ಲೇ ಎನ್‌ಕೌಂಟರ್ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Related Article

ಪೊಲೀಸರ ಕಾರ್ಯ ಶ್ಲಾಘನೀಯ, ಸೂಕ್ತ ಕಾನೂನು ವ್ಯವಸ್ಥೆ ಮೂಲಕ ಆರೋಪಿಗಳ ಅಂತ್ಯವಾಗಬೇಕಿತ್ತು: ಮಹಿಳಾ ಆಯೋಗ

'ಹತ್ಯಾಚಾರ': ಕಾಡ್ಗಿಚ್ಚಿನಂತೆ ಹಬ್ಬಿದ ಸುದ್ದಿ, ಪ್ರವಾಸಿ ತಾಣವಾದ ಎನ್ ಕೌಂಟರ್ ಸ್ಥಳ!

ಹೈದರಾಬಾದ್ ಅತ್ಯಾಚಾರಿಗಳ ಬೇಟೆ: ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಪೂರ್ವಯೋಜಿತವಲ್ಲ, ಪೊಲೀಸರ ಆತ್ಮರಕ್ಷಣೆಗಾಗಿ ಎನ್ಕೌಂಟರ್: ಡಿಸಿಪಿ ಪ್ರಕಾಶ್ ರೆಡ್ಡಿ!

ಅತ್ಯಾಚಾರಿಗಳಿಗೆ ಸಿಕ್ಕ ಶಿಕ್ಷೆಗೆ ಬಹಳ ಸಂತೋಷವಾಯಿತು, ನನ್ನ ಮಗಳ ಅತ್ಯಾಚಾರಿಗಳಿಗೂ ಗಲ್ಲುಶಿಕ್ಷೆ ನೀಡಿ: ನಿರ್ಭಯಾ ತಾಯಿ

ಹೈದರಾಬಾದ್: ನರರಾಕ್ಷಸರನ್ನು ಬೇಟೆಯಾಡಿದ್ದು ಕರ್ನಾಟಕದ ಸಿಂಗಂ!

ಪಾಪಿಗಳಿಗೆ ದೇವರೇ ತಕ್ಕ ಶಾಸ್ತಿ ಮಾಡಿದ್ದಾನೆ: ಎನ್ಕೌಂಟರ್ ಕುರಿತು ಪ್ರಿಯಾಂಕಾ ಪೋಷಕರು

ಪ್ರಿಯಾಂಕಾ ರೆಡ್ಡಿ 'ಹತ್ಯಾಚಾರ': ಎಲ್ಲಾ ಆರೋಪಿಗಳು ಎನ್'ಕೌಂಟರ್ ನಲ್ಲಿ ಹತ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com