ದಿಶಾ ಪ್ರಕರಣ: 4 ಆರೋಪಿಗಳ ಎನ್ ಕೌಂಟರ್, ಎನ್‍ಎಚ್‍ಆರ್ ಸಿಯಿಂದ ತನಿಖೆ ಪೂರ್ಣ

ಪಶುವೈದ್ಯೆ ದಿಶಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಎನ್ ಕೌಂಟರ್ ಘಟನೆಯನ್ನು ನಾಲ್ಕು ದಿನಗಳ ಕಾಲ ಎಲ್ಲ ಆಯಾಮಗಳಿಂದ ತನಿಖೆ ನಡೆಸಿದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‍ಎಚ್‍ಆರ್ ಸಿ) ಬುಧವಾರ ಇಲ್ಲಿಂದ ದೆಹಲಿಗೆ ತೆರಳಿದೆ.
ದಿಶಾ ಕೊಲೆ ಆರೋಪಿಗಳು
ದಿಶಾ ಕೊಲೆ ಆರೋಪಿಗಳು

ಹೈದರಾಬಾದ್: ಪಶುವೈದ್ಯೆ ದಿಶಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಎನ್ ಕೌಂಟರ್ ಘಟನೆಯನ್ನು ನಾಲ್ಕು ದಿನಗಳ ಕಾಲ ಎಲ್ಲ ಆಯಾಮಗಳಿಂದ ತನಿಖೆ ನಡೆಸಿದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ( ಎನ್‍ಎಚ್‍ಆರ್ ಸಿ) ಬುಧವಾರ ಇಲ್ಲಿಂದ ದೆಹಲಿಗೆ ತೆರಳಿದೆ. 

ದಿಶಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಡಿ 6ರಂದು ಚಟನ್‍ಪಲ್ಲಿಯಲ್ಲಿ ಪೊಲೀಸರು ಗುಂಡಿಕ್ಕಿ ಸಾಯಿಸಿದ್ದರು.

ನಾಲ್ಕು ದಿನಗಳ ತನಿಖೆಯಲ್ಲಿ ಏಳು ಸದಸ್ಯರ ಎನ್‍ಎಚ್‍ಆರ್ ಸಿ ತಂಡ, ದಿಶಾ ಅವರ ತಂದೆ ಮತ್ತು ಸಹೋದರಿ ಹಾಗೂ ಆರೋಪಿಗಳ ಪೋಷಕರು ಮತ್ತು ಸಂಬಂಧಿಕರನ್ನು ಭೇಟಿ ಮಾಡಿತು. ಘಟನೆ ಕುರಿತು ವಿವಿಧ ಆಯಾಮಗಳಿಂದ ತನಿಖೆ ನಡೆಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com