ಏಷ್ಯಾದ ಅತ್ಯಂತ ಹಿರಿಯ; ಗಿನ್ನೆಸ್ ದಾಖಲೆ ಕೇರಳದ 'ಗಜ ಮುತ್ತಜ್ಜಿ' ಇನ್ನಿಲ್ಲ!

ಏಷ್ಯಾದ ಅತ್ಯಂತ ಹಳೆಯ ಮತ್ತು ಗಿನ್ನೆಸ್ ದಾಖಲೆಗೆ ಸೇರಿದ್ದ 88 ವರ್ಷದ ಗಜ ಮುತ್ತಜ್ಜಿ ಕೊನೆಯುಸಿರೆಳೆಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತಿರುವನಂತಪುರ: ಏಷ್ಯಾದ ಅತ್ಯಂತ ಹಳೆಯ ಮತ್ತು ಗಿನ್ನೆಸ್ ದಾಖಲೆಗೆ ಸೇರಿದ್ದ 88 ವರ್ಷದ ಗಜ ಮುತ್ತಜ್ಜಿ ಕೊನೆಯುಸಿರೆಳೆಯಿತು. 
ಪಪ್ಪನಮ್ ಕೋಡೆ ಸಮೀಪದ ಶುಶ್ರೂಷಾ ಕೇಂದ್ರದಲ್ಲಿ ಹಿರಿಯ ಆನೆ ದಾಕ್ಷಾಯಿನಿ ಮೃತಪಟ್ಟಿದೆ. 2016ರಲ್ಲಿ ಆನೆಗಳಿಗೆ ಅಜ್ಜಿ ಎಂಬ ಬಿರುದನ್ನು ನೀಡಲಾಗಿತ್ತು. ಆ ಮೂಲಕ ಅದು ಏಷ್ಯಾದ ಅತ್ಯಂತ ಹಳೆಯ ಸಾಕಾನೆ ಎಂಬ ಕೀರ್ತಿಯೊಂದಿಗೆ ಗಿನ್ನೆಸ್ ಸೇರಿತ್ತು ಸೇರಿತ್ತು. 
ಪದ್ಮನಾಭ ಸ್ವಾಮೀ ದೇವಸ್ಥಾನದಲ್ಲಿ ಕಳೆದ ಅರಟ್ಟು ಮೆರವಣಿಗೆಯಲ್ಲಿ ದಾಕ್ಷಾಯಿಣಿ ಈಗ ಮೂರು ವರ್ಷ ಹಿಂದಿನವರೆಗೂ ಭಾಗವಹಿಸುತ್ತಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com