ಪಣಜಿ: ಗೋವಾ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ಫೆ.14 ರಂದು ನಿಧನರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಡಿಸೋಜಾ (64) ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿ ಪಣಜಿಯಲ್ಲೇ ಚಿಕಿತ್ಸೆ ಮುಂದುವರೆಸಿದ್ದರು. ಡಿಸೋಜಾ ಅವರ ನಿಧನದಿಂದಾಗಿ ಗೋವಾ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 13 ಕ್ಕೆ ಕುಸಿದಿದೆ.
ಡಿಸೋಜಾ ಅವರ ನಿಧನಕ್ಕೆ ಗೋವಾ ಬಿಜೆಪಿ ಸಂಸದ ನರೇಂದ್ರ ಸವಾಯ್ಕರ್ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಮನೋಹರ್ ಪರಿಕ್ಕರ್ ಅವರ ಸಚಿವ ಸಂಪುಟದಿಂದ ಡಿಸೋಜಾ ಅವರನ್ನು ಕೈಬಿಡಲಾಗಿತ್ತು.
ಗೋವಾ ವಿಧಾನಸಭೆಗೆ ಡಿಸೋಜಾ ಅವರು 1999 ರಲ್ಲಿ ಗೋವಾ ರಾಜೀವ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು ನಂತರದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.