ಪುಲ್ವಾಮಾ ದಾಳಿ: ಪಾಕ್ ಜತೆ ಶಾಂತಿ ಮಾತುಕತೆಯೇ ಪರಿಹಾರವೆಂದ ಸಿಧು!
ಗುರುವಾರ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಇಡೀ ದೇಶ ತೀವ್ರ ಖಂಡನೆ ವ್ಯಕ್ತಪಡಿಸುತ್ತಿದೆ. ಜನರು ಆಕ್ರೋಶಭರಿತರಾಗಿ ಪಾಕ್ ವಿರುದ್ಧ ಹರಿಹಾಯುತ್ತಿದ್ದಾರೆ. ಆದರೆ ಪಂಜಾಬ್ ಸರ್ಕಾರದ ....
ಪುಲ್ವಾಮಾ ದಾಳಿ: ಪಾಕ್ ಜತೆ ಶಾಂತಿ ಮಾತುಕತೆಯೇ ಪರಿಹಾರವೆಂದ ಸಿಧು!
ಅಮೃತಸರ್: ಗುರುವಾರ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಇಡೀ ದೇಶ ತೀವ್ರ ಖಂಡನೆ ವ್ಯಕ್ತಪಡಿಸುತ್ತಿದೆ. ಜನರು ಆಕ್ರೋಶಭರಿತರಾಗಿ ಪಾಕ್ ವಿರುದ್ಧ ಹರಿಹಾಯುತ್ತಿದ್ದಾರೆ. ಆದರೆ ಪಂಜಾಬ್ ಸರ್ಕಾರದ ಸಚಿವ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ ಎಂದು ಸಲಹೆ ನಿಡಿದ್ದಾರೆ.
40ಕ್ಕೆ ಹೆಚ್ಚು ಯೋಧರನ್ನು ಬಲಿಪಡೆದ ಉಗ್ರರ ಕೃತ್ಯಕ್ಕೆ ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗಿದೆ. ಪ್ರಧಾನಿ ಮೋದಿ ತಾವು ಯೋಧರ ಬಲಿದಾನ ವ್ಯರ್ಥವಾಗಲು ಬಿಡಲ್ಲ ಎಂದಿದ್ದಾರೆ. ಅ;ಲ್ಲದೆ ಸೇನೆಗೆ ಸಂಪೂರ್ಣ ಸ್ವಾತಂತ್ರವನ್ನೂ ನೀಡಲಾಗಿದೆ.
ಇತ್ತ ಸಿಧು ಮಾತ್ರ ಪಾಕ್ ಜತೆ ಮಾತುಕತೆಯ ಸಲಹೆ ನೀಡಿದ್ದಾರೆ. ಪುಲ್ವಾಮದಲ್ಲಿ ನಡೆದ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಆರೋಪ ಮಾಡುವುದು ಸರಿಯಲ್ಲ ದಾಳಿ ನಡೆದದ್ದು ಖಂಡನಾರ್ಹ, ಆದರೆ ಕೆಲವೇ ಜನರು ಮಾಡಿದ ಕೆಲಸಕ್ಕೆ ಒಂದು ರಾಷ್ಟ್ರದ ಮೇಲೆ ಆರೊಪಿಸುವುದು ಸಲ್ಲ.ಇದಕ್ಕೆಲ್ಲಾ ಶಾಂತಿ ಮಾತುಕತೆಯಷ್ಟೇ ಪರಿಹಾರವಾಗಬಲ್ಲದು ಎಂದು ಹೇಳಿರುವ ಸಿಧು ಪಾಕಿಸ್ತಾನದ ಪರ ಮೃದು ಧೋರಣೆ ತಳೆದಿದ್ದಾರೆ.
"ಯಾರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಲಲು ಬಯಸುತ್ತಿಲ್ಲ, ಇದೇ ಕಾರಣ ಇಂತಹಾ ಘಟನೆಗಳು ಮತ್ತೆ ಮರುಕಳಿಸುತ್ತಿದೆ.ಭಯೋತ್ಪಾಧನೆಯಿಂದ ಏನೂ ಸಾಧಿಸಲಾಗದು, ಶಾಂತಿ ಮಾತುಕತೆಯೊಂದೆ ಎಲ್ಲಕ್ಕೆ ಪರಿಹಾರ." ಸಿಧು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.