ಪುಲ್ವಾಮ ಭಯೋತ್ಪಾದಕ ದಾಳಿ ಸಂಬಂಧ 7 ಯುವಕರ ಹೆಡೆಮುರಿ ಕಟ್ಟಿದ ಪೊಲೀಸರು!

ಪುಲ್ವಾಮದಲ್ಲಿ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಸಿಆರ್ ಪಿಎಫ್ ಯೋಧರನ್ನು ಗುರಿಯಾಗಿರಿಸಿಕೊಂಡು ನಡೆಸಿರುವ ದಾಳಿಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಪೊಲೀಸರು 7 ಜನರನ್ನು
ಪುಲ್ವಾಮ ಭಯೋತ್ಪಾದಕ ದಾಳಿ ಸಂಬಂಧ 7 ಯುವಕರ ಹೆಡೆಮುರಿ ಕಟ್ಟಿದ ಪೊಲೀಸರು!
ಪುಲ್ವಾಮ ಭಯೋತ್ಪಾದಕ ದಾಳಿ ಸಂಬಂಧ 7 ಯುವಕರ ಹೆಡೆಮುರಿ ಕಟ್ಟಿದ ಪೊಲೀಸರು!
Updated on
ಶ್ರೀನಗರ: ಪುಲ್ವಾಮದಲ್ಲಿ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಸಿಆರ್ ಪಿಎಫ್ ಯೋಧರನ್ನು ಗುರಿಯಾಗಿರಿಸಿಕೊಂಡು ನಡೆಸಿರುವ ದಾಳಿಗೆ ಸಂಬಂಧಿಸಿದಂತೆ  ಜಮ್ಮು-ಕಾಶ್ಮೀರ ಪೊಲೀಸರು 7 ಜನರನ್ನು ವಶಕ್ಕೆ ಪಡೆದಿದ್ದಾರೆ. 
ಆತ್ಮಾಹುತಿ ದಾಳಿ ನಡೆಸುವುದಕ್ಕೆ ಯೋಜನೆ ರೂಪಿಸಿದ್ದರೊಂದಿಗೆ ನಂಟು ಹೊಂದಿರುವ ಶಂಕೆಯಡಿ ಪುಲ್ವಾಮ ಹಾಗೂ ಅವಂತಿಪೊರದಿಂದ ಯುವಕರನ್ನು ವಶಕ್ಕೆ ಪಡೆಯಲಾಗಿದೆ. 
ಸಿಆರ್ ಪಿಎಫ್ ಯೋಧರನ್ನು ಗುರಿಯಾಗಿರಿಸಿಕೊಂಡು ನಡೆಸಿದ ದಾಳಿಯನ್ನು ಪಾಕಿಸ್ತಾನದ ವ್ಯಕ್ತಿ ಜೈಶ್-ಎ-ಮೊಹಮ್ಮದ್ ನ ಕಮ್ರಾನ್ ಎಂಬ ವ್ಯಕ್ತಿ ಯೋಜಿಸಿದ್ದಾನೆ. ಈ ವ್ಯಕ್ತಿ ಪುಲ್ವಾಮ, ಅವಂತಿಪೊರ ಹಾಗೂ ದಕ್ಷಿಣ ಕಾಶ್ಮೀರದ ತ್ರಾಲ್ ನಲ್ಲಿ ಸಂಚರಿಸುತ್ತಿರುತ್ತಾನೆ ಎಂದು ತಿಳಿದುಬಂದಿದೆ. 
ಭಯೋತ್ಪಾದಕ ಕೃತ್ಯವನ್ನು ಟ್ರಾಲ್ ನ ಮಿಡೂರಾದಲ್ಲಿ ಯೋಜಿಸಲಾಗಿತ್ತು, ಈ ದುಷ್ಕೃತ್ಯವನ್ನು ಯೋಜಿಸಿ ಸ್ಫೋಟಕಗಳನ್ನು ಸಿಗುವಂತೆ ಮಾಡಿದ್ದ ಮತ್ತೋರ್ವ ಜೆ ಇಎಂ ನ ಉಗ್ರನನ್ನು ಪೊಲೀಸರು ಹುಡುಕುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com