'ಒಂದು ಅವಕಾಶ ಕೊಡಿ ಪಾಕಿಸ್ತಾನಕ್ಕೆ ನುಗ್ಗಿ 400 ತಲೆಗಳನ್ನು ತರುತ್ತೇವೆ' -ವಿಡಿಯೋ ವೈರಲ್

ಪುಲ್ವಾಮಾದಲ್ಲಿ ನಡೆದ ದಾಳಿ ಜನರ ಮನಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶದ ಕಿಚ್ಚು ಹೆಚ್ಚಿಸಿರುವಂತೆ ಸೈನಿಕರೊಬ್ಬರ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಭಾರತೀಯ ಯೋಧ
ಭಾರತೀಯ ಯೋಧ
Updated on: 

ಜಮ್ಮು-ಕಾಶ್ಮೀರ: ಪುಲ್ವಾಮಾದಲ್ಲಿ ನಡೆದ ದಾಳಿ ಜನರ ಮನಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶದ ಕಿಚ್ಚು ಹೆಚ್ಚಿಸಿರುವಂತೆ ಸೈನಿಕರೊಬ್ಬರ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಅನುಮತಿ ನೀಡಿದ್ದರೆ ಸಾಕು, ನಾವು ಯಾವುದೋ ಒಂದು ಮಾರ್ಗದಿಂದ ಪಾಕಿಸ್ತಾನದೊಳಗೆ ನುಗ್ಗುತ್ತೇವೆ. ಒಬ್ಬ ಉಗ್ರವಾದಿ ನಮ್ಮ ನಲವತ್ತು ಸೈನಿಕರನ್ನು ಕೊಲ್ಲುತ್ತಾನೆ ಎಂದರೆ ನಾವೇಕೆ ಸುಮ್ಮನೆ ಇರಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ನಾಲ್ಕು ಜನ ಸ್ನೇಹಿತರಿದ್ದೇವೆ.ಉಳಿದವರು ವಿಡಿಯೋದಲ್ಲಿ ಬರಲು ಇಷ್ಟಪಡುತ್ತಿಲ್ಲ .ಆದರೆ, ಒಂದಂತೂ ನಿಜ ಪಾಕಿಸ್ತಾನಕ್ಕೆ ಹೇಗಾದರೂ ನುಗ್ಗಿ, ಕನಿಷ್ಟ ಪಕ್ಷ  400 ತಲೆಗಳನ್ನಾದರೂ ತರುತ್ತೇವೆ ಎಂದು ತರುಣ ಯೋಧ ಆಕ್ರೋಶದ ನುಡಿಗಳನ್ನಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com