ದೇಶ

ರಾಹುಲ್ ಗಾಂಧಿ ಪ್ರಕಾರ ಇದು ಭಾರತದ ಅತ್ಯಂತ ಶ್ರೇಷ್ಠ ಶಕ್ತಿ

ರಾಹುಲ್ ಗಾಂಧಿ ಪ್ರಕಾರ ಇದು ಭಾರತದ ಅತ್ಯಂತ ಶ್ರೇಷ್ಠ ಶಕ್ತಿ
ರಾಹುಲ್ ಗಾಂಧಿ ಪ್ರಕಾರ ಇದು ಭಾರತದ ಅತ್ಯಂತ ಶ್ರೇಷ್ಠ ಶಕ್ತಿ
Published On :
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ್ದು, ಇಲ್ಲಿನ ಸಂಸತ್ ಕಾರ್ಯನಿರ್ವಹಣೆಯ ಬಗ್ಗೆ ಅಫ್ಘಾನಿಸ್ತಾನದ ಸಂಸದರು ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ. 
ಫೇಸ್ ಬುಕ್ ಪೋಸ್ಟ್ ನಲ್ಲಿ ಘಟನೆಯೊಂದನ್ನು ವಿವರಿಸಿರುವ ರಾಹುಲ್ ಗಾಂಧಿ, ಪ್ರಜಾಪ್ರಭುತ್ವ ಭಾರತದ ಅತ್ಯಂತ ಶ್ರೇಷ್ಠ ಶಕ್ತಿಯಾಗಿದೆ ಎಷ್ಟೇ ಕಷ್ಟವಾದರೂ ಸಹ ಅದನ್ನು ಸಮರ್ಥಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 
"ಒಮ್ಮೆ ಸಂಸತ್ ನ  ಸಂದರ್ಶಕರ ಗ್ಯಾಲರಿಯಲ್ಲಿ ಅಫ್ಘಾನಿಸ್ಥಾನದ ಸಂಸದರು ಕುಳಿತಿರುವುದನ್ನು ನೋಡಿದೆ, ವಿದೇಶದಿಂದ ಸಂಸದರು ಬಂದಿದ್ದಾರೆ, ಆದರೆ ನಾವು ಸಂಸತ್ ನಲ್ಲಿ ಕಿರುಚುತ್ತಿದ್ದೆವು, ಕನಿಷ್ಠ ಅವರು ಬಂದಾಗಲಾದರೂ ಏಕೆ ನಾವು ಘನತೆಯಿಂದ ನಡೆದುಕೊಳ್ಳಬೇಕಿತ್ತು ಎಂದು ಅನಿಸಿತ್ತು. ಕಲಾಪದ ನಂತರ ಅಫ್ಘಾನಿಸ್ಥಾನದ ಸಂಸದರು ನನ್ನನ್ನು ಭೇಟಿ ಮಾಡಲು ಕಚೇರಿಗೆ ಬಂದರು, ಅವರೊಂದಿಗೆ ಮಾತನಾಡುತ್ತಾ, ಸಂಸತ್ ನಲ್ಲಿ ಉತ್ತಮ ಚರ್ಚೆಯಾಗದೇ ವಿಷಯದ ಬಗ್ಗೆ ಬೇಸರ ಮಾಡಿಕೊಂಡೆ. ಆದರೆ ಅವರ ಪ್ರತಿಕ್ರಿಯೆ ನನ್ನನ್ನು ಅಚ್ಚರಿಗೊಳಿಸಿತ್ತು, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 
ಭಾರತಕ್ಕೆ ಬಂದಿದ್ದ ಅಫ್ಘಾನಿಸ್ಥಾನದ ಸಂಸದರು ಇಲ್ಲಿನ ಸಂಸತ್ ಕಾರ್ಯನಿರ್ವಹಣೆ ಮಾಡುವುದನ್ನು ಕಂಡು, ನಮ್ಮ ದೇಶದಲ್ಲಿ ನಿಮ್ಮ ಸಂಸತ್ ನಲ್ಲಿ ನಡೆಯುವ ಚರ್ಚೆಯನ್ನು ಬಂದೂಕುಗಳಿಂದ ನಡೆಸುತ್ತಾರೆ ಎಂದು ಹೇಳಿದ್ದರು. ನಮ್ಮ ಅತಿ ದೊಡ್ಡ ಶಕ್ತಿಯೇ ಪ್ರಜಾಪ್ರಭುತ್ವ ಅದನ್ನು ಉಳಿಸಿಕೊಳ್ಳಬೇಕೆಂದು ರಾಹುಲ್ ಗಾಂಧಿ ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.