ದೇಶ

ಓರ್ವ ಭಯೋತ್ಪಾದಕ ಸತ್ತರೂ ನೋವಾಗುತ್ತೆ: ಜಮ್ಮು-ಕಾಶ್ಮೀರ ರಾಜ್ಯಪಾಲ

ಓರ್ವ ಭಯೋತ್ಪಾದಕ ಸತ್ತರೂ ನೋವಾಗುತ್ತೆ: ಜಮ್ಮು-ಕಾಶ್ಮೀರ ರಾಜ್ಯಪಾಲ
ಭಯೋತ್ಪಾದಕರು ಸತ್ತರೂ ನೋವಾಗುತ್ತೆ: ಜಮ್ಮು-ಕಾಶ್ಮೀರ ರಾಜ್ಯಪಾಲರು
Published On :
ಭಯೋತ್ಪಾದಕರು ಸತ್ತರೂ ನೋವಾಗುತ್ತದೆ ಎಂದು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್ ಹೇಳಿದ್ದಾರೆ. 
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಚಟುವಟಿಕೆಗಳನ್ನು ಸಂಪೂರ್ಣವಾಗಿ ಕಡಿವಾಣ ಹಾಕುವಲ್ಲಿ ಯಶಸ್ಸುಕಂಡಿರುವ ಭದ್ರತಾ ಪಡೆಗಳು ಹಾಗೂ ರಾಜ್ಯ ಪೊಲೀಸರಿಗೆ ಅಭಿನಂದನೆ ಸಲ್ಲಿಸಿರುವ ಸತ್ಯಪಾಲ್ ಮಲೀಕ್, ಹಿಂಸಾಚಾರ ಬಿಟ್ಟು ಮುನ್ನೆಲೆಗೆ ಬರುವಂತೆ ದಂಗೆಕೋರರಿಗೆ ಕರೆ ನೀಡಿದ್ದಾರೆ. 
ಇದೇ ವೇಳೆ ತಮ್ಮ ಆಡಳಿತ ಯಂತ್ರ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಪುನರ್ವಸತಿ ಪ್ಯಾಕೇಜ್ ನ್ನು ರೂಪಿಸುವಲ್ಲಿ ಕಾರ್ಯನಿರತವಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರು ತಮ್ಮ ಕರ್ತವ್ಯವನ್ನು ಸಾಧ್ಯವಾದಷ್ಟೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.  ಆದರೆ ಓರ್ವ ಭಯೋತ್ಪಾದಕ ಮೃತಪಟ್ಟರೂ ಅದು ನನಗೆ  ನೋವುಂಟಾಗುತ್ತದೆ. ಭಯೋತ್ಪಾದಕರು ಹಿಂಸಾಚಾರ ಬಿಟ್ಟು ಮುನ್ನೆಲೆಗೆ ಬರಬೇಕು ಎಂದು ಮಲೀಕ್ ಮಾಧ್ಯಮಗಳಿಗೆ ಹೇಳಿದ್ದಾರೆ. 
ನಾನು ರಾಜ್ಯಪಾಲನಾಗಿ ಅಧಿಕಾರ ವಹಿಸಿಕೊಂಡಾಗ ಭದ್ರತಾ ಪಡೆಗಳಿಗೆ ಅತ್ಯುತ್ತಮ ಸೌಲಭ್ಯಗಳನ್ನು ನೀಡಲು ಯತ್ನಿಸಿದ್ದೆ. ಭದ್ರತಾ ಪಡೆಗಳು ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಣೆ ಮಾಡುವುದನ್ನು ನೋಡಿದ್ದೆ ಎಂದು ಮಲೀಕ್ ಹೇಳಿದ್ದಾರೆ. 
ನಾವು ನಮ್ಮ ಮನೆಗಳಲ್ಲಿ ರಾತ್ರಿ ಹೊತ್ತು ನಿದ್ದೆ ಮಾಡುತ್ತಿದ್ದಾಗ ಅವರು ಕಾರ್ಯಾಚಾರಣೆ ಮಾಡುತ್ತಿರುತ್ತಾರೆ.  ಬೆಳಿಗ್ಗೆ ವರೆಗೂ ಕಾರ್ಯಾಚರಣೆ ಮಾಡುತ್ತಿರುತ್ತಾರೆ ಎಂದು ಸತ್ಯಪಾಲ್ ಮಲೀಕ್ ಭದ್ರತಾ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.