ಇದೊಂದು ಅಕ್ರಮ ಕಲ್ಲಿದ್ದಲು ಗಣಿಯಾಗಿದ್ದು ಅಲ್ಲಿ ಕೆಲಸ ಮಾಡುತ್ತಿದ್ದ 15 ಕಾರ್ಮಿಕರು ಡಿಸೆಂಬರ್ 13ರಂದು ಸುಮಾರು 370 ಅಡಿಯಲ್ಲಿ ಸಿಲುಕಿದ್ದರು. ಗಣಿ ಅಗೆಯುತ್ತಿದ್ದಾಗ ಸಮೀಪದ ನದಿಯ ನೀರು ನುಗ್ಗಿ ಅವಘಡ ಸಂಭವಿಸಿತ್ತು. ಅವರನ್ನು ರಕ್ಷಿಸಲು ನೌಕಾಪಡೆ ಸೇರಿ ಹಲವು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿದ್ದವು. ಕಾರ್ಮಿಕರ ರಕ್ಷಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿ, ಮೇಘಾಲಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.