ರಾಹುಲ್ ಗಾಂಧಿ ಯೋಗ ಮಾಡದಿದ್ದಕ್ಕೆ ಚುನಾವಣೆಲಿ ಕಾಂಗ್ರೆಸ್ ಸೋತಿದೆ: ಯೋಗಗುರು ರಾಮ್‍ದೇವ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯೋಗ ಮಾಡದ ಕಾರಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷ ಸೋಲು ಕಂಡಿದೆ ಎಂದು ಯೋಗಗುರು, ಪತಂಜಲಿ ಸಂಸ್ಥೆಯ ಆದ್ವರ್ಯ ಬಾಬಾ ರಾಮ್‍ದೇವ್ ಹೇಳೀದ್ದಾರೆ.
ರಾಮ್‍ದೇವ್
ರಾಮ್‍ದೇವ್
Updated on: 
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯೋಗ ಮಾಡದ ಕಾರಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷ ಸೋಲು ಕಂಡಿದೆ ಎಂದು ಯೋಗಗುರು, ಪತಂಜಲಿ ಸಂಸ್ಥೆಯ ಆದ್ವರ್ಯ ಬಾಬಾ ರಾಮ್‍ದೇವ್ ಹೇಳೀದ್ದಾರೆ.
ಜೂನ್ 21  ಅಂತರಾಷ್ಟ್ರೀಯ ಯೋಗ ದಿನವಾಗಿದ್ದು ಈ ಸಂಬಂಧ ತಯಾರಿ ನಡೆಸಿರುವ ರಾಮ್‍ದೇವ್ ಯೋಗ ಮಾಡುವವರಿಗಷ್ಟೇ ಅಚ್ಚೇ ದಿನ್ ಬರುತ್ತದೆ ಎಂದು ಹೇಳಿದ್ದಾರೆ.
ಯೋಗವನ್ನು ವಿಶ್ವವ್ಯಾಪಿ ಜನಪ್ರಿಯಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ರಾಮ್‍ದೇವ್ ರಾಹುಲ್ ಗಾಂಧಿ ಯೋಗ ಮಾಡದ ಕಾರಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ ಎಂದು ಟೀಕಿಸಿದ್ದಾರೆ.
"ಮೋದಿ ಸಾರ್ವಜನಿಕವಾಗಿ ಯೋಗ ಮಾಡುತ್ತಾರೆ. ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ, ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಗುಪ್ತವಾಗಿ ಯೋಗಾಭ್ಯಾಸ ಮಾಡುತ್ತಿದ್ದರು. ಆದರೆ ಅವರ ವಂಶದ ಕುಡಿಯಾಗಿರುವ ರಾಹುಲ್ ಗಾಂಧಿ ಯೋಗ ಮಾಡುವುದಿಲ್ಲ.ಹಾಗಾಗಿ ಅವರ ರಾಜಕೀಯ ಜೀವನ ಇಳಿಮುಖದತ್ತ ಸಾಗಿದೆ. ಯೋಗ ಮಾಡುವವರಿಗೆ ಅಚ್ಚೇ ದಿನ್ ಬರುತ್ತದೆ" ರಾಮ್‍ದೇವ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com