ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ವಾಯುದಾಳಿ ಮಾಡುವ ಮೂಲಕ ತಾನು ಯಾವುದೇ ಕಾರಣಕ್ಕೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದೆ ಎಂದು ನಿವೃತ್ತ ಭಾರತೀಯ ರಾಯಭಾರಿ ಗೌತಮ್ ಬಾಂಬವಾಲೆ ಹೇಳಿದ್ದಾರೆ. ಪಿಒಕೆಯಲ್ಲಿ ಭಾರತೀಯ ವಾಯುಸೇನೆಯ ವಾಯುದಾಳಿ ಕುರಿತು ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಸ್ತುತ ಭಾರತದ ಮುಂದೆ ವಿಫಲ ಅವಕಾಶಗಳಿದ್ದು,ಜೆಇಎಂ ಉಗ್ರ ಸಂಘಟನೆ ಪುಲ್ವಾಮ ಉಗ್ರ ದಾಳಿ ಹೊಣೆಗಾರಿಕೆ ಹೊತ್ತುಕೊಂಡಿದೆ. ಹೀಗಾಗಿ ವಿಶ್ವಸಂಸ್ಥೆಯಲ್ಲಿ ಆ ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಬೇಕು ಎಂಬ ಭಾರತದ ಆಗ್ರಹಕ್ಕೆ ಅಮೆರಿಕ, ರಷ್ಟಾ. ಪ್ರಾನ್ಸ್, ಬ್ರಿಟನ್ ದೇಶಗಳಿಂದ ಬೆಂಬಲ ವ್ಯಕ್ತವಾಗಿದೆ.