ಭಯೋತ್ಪಾದಕರಿಗೆ ಆರ್ಥಿಕ ನೆರವು: ಕಾಶ್ಮೀರಿ ಉದ್ಯಮಿಗಳ ಆಸ್ತಿ ಜಪ್ತಿಗೆ ಮುಂದಾದ ಇಡಿ
ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿರುವವರ ವಿರುದ್ಧ ಪ್ರಮುಖ ಕಾರ್ಯಾಚರಣೆ ನಡೆಸಿರುವ ಜಾರಿ ನಿರ್ದೇಶನಾಲಯ ಕಾಶ್ಮೀರಿ ಉದ್ಯಮಿಗೆ ಸೇರಿದ ಆಸ್ತಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಪ್ರಾರಂಭಿಸಿದೆ.
ಭಯೋತ್ಪಾದಕರಿಗೆ ಆರ್ಥಿಕ ನೆರವು: ಕಾಶ್ಮೀರಿ ಉದ್ಯಮಿಗಳ ಆಸ್ತಿ ಜಪ್ತಿಗೆ ಮುಂದಾದ ಇಡಿ
ನವದೆಹಲಿ: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿರುವವರ ವಿರುದ್ಧ ಪ್ರಮುಖ ಕಾರ್ಯಾಚರಣೆ ನಡೆಸಿರುವ ಜಾರಿ ನಿರ್ದೇಶನಾಲಯ ಕಾಶ್ಮೀರಿ ಉದ್ಯಮಿಗೆ ಸೇರಿದ ಆಸ್ತಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಪ್ರಾರಂಭಿಸಿದೆ.
ಶ್ರೀನಗರ ಮೂಲದ ಉದ್ಯಮಿ ಜಹೂರ್ ಅಹ್ಮದ್ ಶಾ ವಟಾಲಿಗೆ ಸೇರಿದ ಬಂಗಲೆ, ಫಾರ್ಮ್ ಹೌಸ್ ಸೇರಿದಂತೆ 25 ಆಸ್ತಿಗಳನ್ನು ಜಮ್ಮು-ಕಾಶ್ಮೀರ ಹಾಗೂ ದೇಶದ ಇತರ ಭಾಗಗಳಲ್ಲಿ ವಶಪಡಿಸಿಕೊಳ್ಳುವುದಕ್ಕೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಈ ಆಸ್ತಿಗಳನ್ನು ಖರೀದಿಸುವುದಕ್ಕೆ ಬಹುಪಾಲು ಹಣದ ಮೂಲ ಪಾಕಿಸ್ತಾನದ ಉಗ್ರ ಹಫೀಸ್ ಸಯೀದ್, ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಶಂಕೆ ವ್ಯಕ್ತಪಡಿಸಿದೆ.
ಉಗ್ರ ಹಫೀಜ್ ಸಯೀದ್ ನ ಆರ್ಥಿಕತೆಯನ್ನು ಭಾರತದಲ್ಲಿ ನಿರ್ವಹಣೆ ಮಾಡುತ್ತಿರುವ ಆರೋಪದಡಿ ಉದ್ಯಮಿ ಜಹೂರ್ ನ ವಿಚಾರಣೆ ನಡೆಸಲಾಗುತ್ತಿದೆ. ಎನ್ಐಎ ದಾಖಲಿಸಿರುವ ಪ್ರಕರಣವನ್ನು ಆಧರಿಸಿ ಇಡಿ ತನಿಖೆ ನಡೆಸಲಾಗುತ್ತಿದೆ.