ಚತ್ತೀಸ್ ಗಢದಲ್ಲಿ ಮತ್ತೆ ನಕ್ಸಲರ ದಾಳಿ: 9 ಜನರಿಗೆ ಗಾಯ

ಚತ್ತೀಸ್ ಗಢದಲ್ಲಿ ಮತ್ತೆ ನಕ್ಸಲರ ದಾಳಿ ನಡೆದಿದ್ದು ಐಇಡಿ ಸ್ಫೋಟದಲ್ಲಿ 9 ಜನರಿಗೆ ಗಾಯಗಳಾಗಿವೆ.
ಚತ್ತೀಸ್ ಗಢದಲ್ಲಿ ಮತ್ತೆ ನಕ್ಸಲರ ದಾಳಿ: 9 ಜನರಿಗೆ ಗಾಯ
ಚತ್ತೀಸ್ ಗಢದಲ್ಲಿ ಮತ್ತೆ ನಕ್ಸಲರ ದಾಳಿ: 9 ಜನರಿಗೆ ಗಾಯ
Updated on
ದಾಂತೇವಾಡ: ಚತ್ತೀಸ್ ಗಢದಲ್ಲಿ ಮತ್ತೆ ನಕ್ಸಲರ ದಾಳಿ ನಡೆದಿದ್ದು ಐಇಡಿ ಸ್ಫೋಟದಲ್ಲಿ 9 ಜನರಿಗೆ ಗಾಯಗಳಾಗಿವೆ. 
ಬಿಜಾಪುರ್ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ ಬಳಸಿ ಎಸ್ ಯುವಿ ಯನ್ನು ಸ್ಫೋಟಿಸಲಾಗಿದೆ. 
ಕಾರ್ಯಕ್ರಮವೊಂದಕ್ಕೆ ದಾಂತೇವಾಡ ಜಿಲ್ಲೆಗೆ ತೆರಳುತ್ತಿದ್ದಾಗ ಸಂಜೆ 7:45 ರ ವೇಳೆಗೆ ಪೆಡ್ಡಕೋಡೆಪಾಲ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಚತ್ತೀಸ್ ಗಢದಲ್ಲಿ ಎರಡು ದಿನಗಳ ಹಿಂದೆ ಇದೇ ಮಾದರಿಯಲ್ಲಿ ನಕ್ಸಲ್ ದಾಳಿ ನಡೆದಿತ್ತು. ಈ ಹಿಂದೆ ಸಿಆರ್ ಪಿಎಫ್ ಸಿಬ್ಬಂದಿಗಳಿದ್ದ ವಾಹನವನ್ನು ಸುಧಾರಿತ ಸ್ಫೋಟಕ ಸಾಧನ ಬಳಸಿ ಸ್ಫೋಟಿಸಲಾಗಿತ್ತು. ಈ ಬಾರಿ ಸಾಮಾನ್ಯ ಜನರು ಬಳಸುವ ಎಸ್ ಯುವಿಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ. 
ಗಾಯಗೊಂಡ 9 ಮಂದಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಈ ಬಾರಿಯೂ ಕಳೆದ ಬಾರಿಯಂತೆ ಸಿಆರ್ ಪಿಎಎಫ್ ನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಯತ್ನಿಸಿದ್ದಾರೆ. ಆದರೆ ದಾಳಿಗೆ ಎಸ್ ಯುವಿ ಸಿಲುಕಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com