ಪ್ರತ್ಯೇಕತವಾದಿಗಳ ಹೆಡೆಮುರಿ ಕಟ್ಟುತ್ತಿರುವ ಕೇಂದ್ರ: ಹುರಿಯತ್ ನಾಯಕ ಗಿಲಾನಿಗೆ 14 ಲಕ್ಷ ದಂಡ

ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ 10 ಸಾವಿರ ಡಾಲರ್ ಹೊಂದಿದ್ದಕ್ಕಾಗಿ ಹುರಿಯತ್ ಕಾನ್ಪರೆನ್ಸ್ ನಾಯಕ ಸೈಯದ್ ಅಲಿ ಷಾ ಗಿಲಾನಿಗೆ...
ಸೈಯದ್ ಅಲಿ ಶಾ ಗಿಲಾನಿ
ಸೈಯದ್ ಅಲಿ ಶಾ ಗಿಲಾನಿ
ನವದೆಹಲಿ: ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ 10 ಸಾವಿರ ಡಾಲರ್ ಹೊಂದಿದ್ದಕ್ಕಾಗಿ ಹುರಿಯತ್ ಕಾನ್ಪರೆನ್ಸ್ ನಾಯಕ ಸೈಯದ್ ಅಲಿ ಷಾ ಗಿಲಾನಿಗೆ ಜಾರಿ ನಿರ್ದೇಶನಾಲಯ 14 ಲಕ್ಷ ರೂಪಾಯಿ ದಂಡ ವಿಧಿಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಹೊರಡಿಸಲಾದ ಆದೇಶದ ಭಾಗವಾಗಿ ವಿದೇಶಿ ಕರೆನ್ಸಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ  ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀನಗರದ ಹೈದೆರ್ ಪೊರಾ ಪ್ರದೇಶದಲ್ಲಿರುವ ಗಿಲಾನಿ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com