ಕೊಟ್ಟ ಮಾತಿನಂತೆ ಬಿಜೆಪಿ ಸಿಎಂ ಹುದ್ದೆ ಬಿಟ್ಟು ಕೊಡಬೇಕು : ಸಂಜಯ್ ರಾವತ್ 

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮೊದಲು ಮುಖ್ಯಮಂತ್ರಿ ಹುದ್ದೆ ಹಂಚಿಕೆ ವಿಷಯದಲ್ಲಿ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಸಹಮತವಿತ್ತು. ಫಲಿತಾಂಶ ಬಂದ ನಂತರ ಬಿಜೆಪಿ ಕಡೆಯಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಮತ್ತು ನಾವು ಕೂಡ ಕಳುಹಿಸಿಲ್ಲ ಎಂದು ಶಿವಸೇನೆ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಹೇಳಿದ್ದಾರೆ.
ಸಂಜಯ್ ರಾವತ್
ಸಂಜಯ್ ರಾವತ್
Updated on: 

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮೊದಲು ಮುಖ್ಯಮಂತ್ರಿ ಹುದ್ದೆ ಹಂಚಿಕೆ ವಿಷಯದಲ್ಲಿ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಸಹಮತವಿತ್ತು. ಫಲಿತಾಂಶ ಬಂದ ನಂತರ ಬಿಜೆಪಿ ಕಡೆಯಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಮತ್ತು ನಾವು ಕೂಡ ಕಳುಹಿಸಿಲ್ಲ ಎಂದು ಶಿವಸೇನೆ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಹೇಳಿದ್ದಾರೆ.


ಮುಖ್ಯಮಂತ್ರಿ ಹುದ್ದೆ ಹಂಚಿಕೆ ವಿಷಯದಲ್ಲಿ ಸಹಮತಕ್ಕೆ ಬಂದಿದ್ದೀರಾ ಎಂದು ಸುದ್ದಿಗಾರರು ಕೇಳಿದಾಗ ಉತ್ತರಿಸಿದ ಸಂಜಯ್ ರಾವತ್, ಚುನಾವಣೆಗೆ ಮುನ್ನ ಸಹಮತವಿತ್ತು. ಅಂದು ಏನು ತೀರ್ಮಾನಿಸಿದ್ದೆವೊ ಮತ್ತು ಏನು ಮಾತನಾಡಿಕೊಂಡಿದ್ದೆವೋ ಅದನ್ನು ಜಾರಿಗೆ ತರುತ್ತೇವೆ ಎಂಬ ನಿರೀಕ್ಷೆಯಿದೆ ಎಂದು ಪುನರುಚ್ಛರಿಸಿದ್ದಾರೆ.


ಹೊಸ ಪ್ರಸ್ತಾವನೆ ಮುಂದಿಟ್ಟುಕೊಂಡು ಸಮಯ ಹಾಳು ಮಾಡುವುದು ಏಕೆ?, ಹಿಂದೆ ಏನು ತೀರ್ಮಾನಿಸಿದ್ದೇವೆಯೋ ಅದರ ಬಗ್ಗೆ ಚರ್ಚೆ ನಡೆಸೋಣ. ಯಾವುದೇ ಹೊಸ ಪ್ರಸ್ತಾವನೆಯನ್ನು ನಾವು ಕಳುಹಿಸಿಲ್ಲ, ಬಿಜೆಪಿ ಕಡೆಯಿಂದ ಬಂದೂ ಇಲ್ಲ ಎಂದರು.


ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ವಿಚಾರ ಸಂಬಂಧ ಕೇಳಿದಾಗ, ಅದಕ್ಕೆ ನಾವು ಹೊಣೆ ಅಲ್ಲ. ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕೆಂದು ಪಿತೂರಿ ನಡೆಸುವವರು ಜನರ ತೀರ್ಪಿಗೆ ಅವಮಾನ ಮಾಡುತ್ತಾರೆ ಎಂದರ್ಥ ಎಂದರು.


ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ 13 ದಿನಗಳಾಯಿತು, ಆದರೆ ಇನ್ನೂ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು, ಹೇಗೆ ಎಂಬ ತೀರ್ಮಾನಕ್ಕೆ ಇನ್ನೂ ಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com