ಕುಡಿದ ಮತ್ತಿನಲ್ಲಿ ಸ್ನೇಕ್ ಡ್ಯಾನ್ಸ್, ವಧುವಿಗೆ ಕಪಾಳಮೋಕ್ಷ ಮಾಡಿದ ವರ: ಮುರಿದು ಬಿತ್ತು ಮದುವೆ, ವಿಡಿಯೋ ವೈರಲ್!

ಭಾರತೀಯ ಮದುವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವರ ಕುಡಿದು ನಾಗಿನ್(ಸ್ನೇಕ್) ಡ್ಯಾನ್ಸ್ ಮಾಡಿದ್ದು ಅಲ್ಲದೆ ವಧುವಿನ ಕಪಾಳಕ್ಕೆ ಹೊಡೆದಿದ್ದರಿಂದ ಮದುವೆ ಮುರಿದು ಬಿದ್ದಿದೆ. 
ವರ
ವರ
Updated on: 

ಲಖನೌ: ಭಾರತೀಯ ಮದುವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವರ ಕುಡಿದು ನಾಗಿನ್(ಸ್ನೇಕ್) ಡ್ಯಾನ್ಸ್ ಮಾಡಿದ್ದು ಅಲ್ಲದೆ ವಧುವಿನ ಕಪಾಳಕ್ಕೆ ಹೊಡೆದಿದ್ದರಿಂದ ಮದುವೆ ಮುರಿದು ಬಿದ್ದಿದೆ. 

ಉತ್ತರ ಪ್ರದೇಶದ ಲಕ್ಕೀಂಪುರದ ಖೀರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವರ ಕುಡಿದು ಅಸಭ್ಯವಾಗಿ ಡ್ಯಾನ್ಸ್ ಮಾಡಿದ್ದರಿಂದ ನೊಂದ ವಧು ಮದುವೆಯನ್ನೇ ರದ್ದು ಮಾಡಿದ್ದಾಳೆ. ಇದರಿಂದ ಗಾಬರಿಗೊಂಡ ವರ ಹಾಗೂ ಆತನ ಪೋಷಕರು ವಧುವಿನ ಮನವೊಲಿಸಲು ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗದೇ ಬರಿಗೈಲಿ ಹಿಂದಿರುಗಿದ್ದಾರೆ. 

ಇನ್ನು ಎರಡು ಕುಟುಂಬದವರು ಮದುವೆಗೆ ನೀಡಿದ್ದ ಉಡುಗೊರೆಗಳನ್ನು ಹಿಂದಿರುಗಿಸಿದ್ದು ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com