ಕೋಲ್ಕತ್ತಾ: ಬಂಗಾಳಿ ನಟಿ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಉಸಿರಾಟದ ತೊಂದರೆಯ ಕಾರಣ್ ಕೋಲ್ಕತ್ತಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಟಿಎಂಸಿ ಪಕ್ಷದಿಂದ ಬಸಿರ್ಹತ್ನಿಂದ ಲೋಕಸಭೆಗೆ ಆಯ್ಕೆಯಾದ ಜಹಾನ್ ಅವರನ್ನು ಭಾನುವಾರ ರಾತ್ರಿ 9.30 ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಣ್ದು ಅವರ ಕುಟುಂಬ ಮೂಲಗಳು ಹೇಳಿದೆ."ಉಸಿರಾಟದ ತೊಂದರೆಯಿಂದಾಗಿ ನುಸ್ರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ಆಸ್ತಮಾ ಸಮಸ್ಯೆ ಇದೆ" ಮೂಲಗಳು ವಿವರಿಸಿದೆ.
"ಜಹಾನ್ ಐಸಿಯುನಲ್ಲಿದ್ದಾರೆ ಆದರೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. " ಹೇಳಿಕೆ ತಿಳಿಸಿದೆ.
Advertisement