ಪ್ರವಾಹ ಪರಿಸ್ಥಿತಿ ಪರಿಶೀಲನೆ ವೇಳೆ ನೀರಿಗೆ ಬಿದ್ದ ಬಿಜೆಪಿ ಸಂಸದ: ವಿಡಿಯೋ ವೈರಲ್

ಭೀಕರ ಪ್ರವಾಹದಿಂದಾದಿ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿರುವ ಬಿಹಾರ ರಾಜ್ಯದಲ್ಲಿ ಪರಿಸ್ಥಿತಿ ಪರಿಶೀಲನೆ ನಡೆಸಲು ತೆರಳಿದ್ದ ಸಂಸದರೇ ನೀರಿನಲ್ಲಿ ಮುಳುಗಿರುವ ಘಟನೆ ಪಾಟ್ನಾದ ಮಸೌರಿ ಪ್ರದೇಶದಲ್ಲಿ ನಡೆದಿದೆ. 
ಪ್ರವಾಹ ಪರಿಸ್ಥಿತಿ ಪರಿಶೀಲನೆ ವೇಳೆ ನೀರಿಗೆ ಬಿದ್ದ ಬಿಜೆಪಿ ಸಂಸದ: ವಿಡಿಯೋ ವೈರಲ್
ಪ್ರವಾಹ ಪರಿಸ್ಥಿತಿ ಪರಿಶೀಲನೆ ವೇಳೆ ನೀರಿಗೆ ಬಿದ್ದ ಬಿಜೆಪಿ ಸಂಸದ: ವಿಡಿಯೋ ವೈರಲ್
Updated on

ಪಾಟ್ನ: ಭೀಕರ ಪ್ರವಾಹದಿಂದಾದಿ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿರುವ ಬಿಹಾರ ರಾಜ್ಯದಲ್ಲಿ ಪರಿಸ್ಥಿತಿ ಪರಿಶೀಲನೆ ನಡೆಸಲು ತೆರಳಿದ್ದ ಸಂಸದರೇ ನೀರಿನಲ್ಲಿ ಮುಳುಗಿರುವ ಘಟನೆ ಪಾಟ್ನಾದ ಮಸೌರಿ ಪ್ರದೇಶದಲ್ಲಿ ನಡೆದಿದೆ. 

ಬಿಜೆಪಿ ಸಂಸದ ರಾಮ ಕೃಪಾಳ್ ಯಾದವ್ ಅವರು ಮಸೌರಿಯಲ್ಲಿ ಪ್ರವಾಹ ಪರಿಸ್ಥಿತಿ ಅವಲೋಕಿಸುವ ಸಲುವಾಗಿ ತೆರಳಿದ್ದರು. ಸಂಸದರನ್ನು ಚಿಕ್ಕ ತೆಪ್ಪವೊಂದರಲ್ಲಿ ಕರೆದೊಯ್ಯಲಾಗಿತ್ತು. ಸಮೀಕ್ಷೆ ನಡೆಸುತ್ತಿದ್ದ ವೇಳೆ ದಡದತ್ತ ವಾಪಸ್ಸಾಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ತೆಪ್ಪ ನೀರಿನಲ್ಲಿ ಮುಳುಗಿದೆ. ಈ ವೇಳೆ ಸಂಸದರು ನೀರಿನಲ್ಲಿ ಬಿದ್ದಿದ್ದಾರೆ,

ಕೂಡಲೇ ಸ್ಥಳೀಯರು ಸಂಸದರನ್ನು ರಕ್ಷಣೆ ಮಾಡಿದ್ದಾರೆ. ಸಂಸದರು ನೀರಿಗೆ ಬಿದ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com