ಫ್ರಾನ್ಸ್ ಜೊತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಚಿಂತನೆ: ರಾಜನಾಥ್ ಸಿಂಗ್

ಮೂರು ದಿನಗಳ ಕಾಲ ಫ್ರಾನ್ಸ್'ಗೆ ಪ್ರಯಾಣ ಬೆಳೆಸುತ್ತಿದ್ದು, ಫ್ರಾನ್ಸ್ ಜೊತೆಗಿನ ಸಂಬಂಧವನ್ನು ಗಾಢವಾಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ. 
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Updated on: 

ಫ್ರಾನ್ಸ್'ಗೆ ಪ್ರಯಾಣ ಬೆಳೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
 

ನವದೆಹಲಿ: ಮೂರು ದಿನಗಳ ಕಾಲ ಫ್ರಾನ್ಸ್'ಗೆ ಪ್ರಯಾಣ ಬೆಳೆಸುತ್ತಿದ್ದು, ಫ್ರಾನ್ಸ್ ಜೊತೆಗಿನ ಸಂಬಂಧವನ್ನು ಗಾಢವಾಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ. 

ಫ್ರಾನ್ಸ್'ಗೆ ತೆರಳುತ್ತಿರುವ ರಾಜನಾಥ್ ಸಿಂಗ್ ಅವರು, ಅಲ್ಲಿ ವಾರ್ಷಿಕ ರಕ್ಷಣಾ ಸಮ್ಮೇಳನ ಹಾಗೂ ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಈ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್ ಅವರು, ದೆಹಲಿಯಿಂದ ಪ್ಯಾರಿಸ್'ಗೆ ಪ್ರಯಾಣ ಬೆಳೆಸುತ್ತಿದ್ದು, ಮೂರು ದಿನಗಳ ಕಾಲ ಫ್ಲಾನ್ಸ್'ಗೆ ಭೇಟಿ ನೀಡಲಾಗುತ್ತದೆ. ಈ ವೇಳೆ ವಾರ್ಷಿಕ ರಕ್ಷಣಾ ಸಮ್ಮೇಲನ, ರಫೇಲ್'ನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಭಾರತ-ಫ್ರಾನ್ಸ್ ದ್ವಿಪಕ್ಷೀಯ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಗತಿ ಕಂಡಿವೆ. ಫ್ರಾನ್ಸ್ ಜೊತೆಗಿನ ಸಂಬಂಧವನ್ನು ಮತ್ತಷ್ಟು ಗಾಢವಾಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com