ಫ್ರೆಂಚ್ ಕಿಸ್ ಕೊಡಲು ಬಂದ ಹೆಂಡತಿಯ ನಾಲಿಗೆ ಕಚ್ಚಿ, ಚಾಕುವಿನಿಂದ ಕತ್ತರಿಸಿದ ಪತಿರಾಯ!

ಗುಂಡಿನ ಮತ್ತೆ ಗಮ್ಮತ್ತು, ಅಳತೆ ಮೀರಿದರೆ ಆಪತ್ತು ಎಂಬ ಗಾದೆಯೊಂದಿದೆ. ಇಲ್ಲಿ ಮುತ್ತಿನ ಗಮ್ಮತ್ತು ಅನುಭವಿಸಲು ಹೋಗಿದ್ದ ಗೃಹಿಣಿಯ ನಾಲಿಗೆಯನ್ನು ಕಚ್ಚಿ, ಚಾಕುವಿನಿಂದ ಕತ್ತರಿಸಿರುವ ಘಟನೆ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಅಹಮದಾಬಾದ್: ಗುಂಡಿನ ಮತ್ತೆ ಗಮ್ಮತ್ತು, ಅಳತೆ ಮೀರಿದರೆ ಆಪತ್ತು ಎಂಬ ಗಾದೆಯೊಂದಿದೆ. ಇಲ್ಲಿ ಮುತ್ತಿನ ಗಮ್ಮತ್ತು ಅನುಭವಿಸಲು ಹೋಗಿದ್ದ ಗೃಹಿಣಿಯ ನಾಲಿಗೆಯನ್ನು ಕಚ್ಚಿ, ಚಾಕುವಿನಿಂದ ಕತ್ತರಿಸಿರುವ ಘಟನೆ ನಡೆದಿದೆ. 

ಅಹಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು ತಸ್ಲೀಮಾ ನಾಲಿಗೆಯನ್ನು ಕಳೆದುಕೊಂಡ ನತದೃಷ್ಟೆ. ಹೌದು ಗಂಡ ಆಯುಬ್ ಕೋಪದಲ್ಲಿ ಪತ್ನಿಯ ನಾಲಿಗೆಯನ್ನು ಕತ್ತರಿಸಿ ಹಾಕಿದ್ದಾನೆ. 

ತಸ್ಲೀಮಾ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು 2018ರಲ್ಲಿ ಆಯುಬ್ ನನ್ನು ಎರಡನೇ ಮದುವೆಯಾಗಿದ್ದರು. ಕೆಲಸ ಮಾಡದೆ ಆಯುಬ್ ಮನೆಯಲ್ಲಿಯೇ ಕುಳಿತುಕೊಂಡು ಹೆಂಡತಿ ತರುವ ಸಂಬಳಕ್ಕೆ ಅವಲಂಬಿತನಾಗಿದ್ದ. ಇದರಿಂದ ಕೋಪಗೊಂಡಿದ್ದ ತಸ್ಲೀಮಾ ಗಂಡನಿಗೆ ಯಾವುದಾದರೊಂದು ಬ್ಯುಸಿನೆಸ್ ಮಾಡುವಂತೆ ಸಲಹೆ ನೀಡುತ್ತಿದ್ದಳು. 

ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಆದರೆ ಕಳೆದ ಬುಧವಾರ ರಾತ್ರಿ ಇಬ್ಬರು ಜಗಳವಾಡಿಕೊಂಡು ಮಲಗಿದ್ದಾರೆ. ನಂತರ ಆಯುಬ್ ಹೆಂಡತಿಯನ್ನು ಪುಸಲಾಯಿಸಿ ಮುದ್ದಿಸಿದ್ದಾನೆ. ನಂತರ ಆಕೆಗೆ ಫ್ರೆಂಚ್ ಕಿಸ್ ಕೊಡುವ ನೆಪದಲ್ಲಿ ಆಕೆಯ ನಾಲಿಗೆಯನ್ನು ಕತ್ತರಿಸಿ ಪರಾರಿಯಾಗಿದ್ದಾನೆ. 

ಮನೆಯಲ್ಲಿ ಒಂಟಿಯಾಗಿದ್ದ ತಸ್ಲೀಮಾ ನಂತರ ತಮ್ಮ ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ತಿಳಿಸಿದ್ದಾಳೆ. ಮನೆಗೆ ಬಂದ ಸಹೋದರಿ ತಸ್ಲೀಮಾಳನ್ನು ಆಸ್ಪತ್ರೆಗೆ ದಾಖಲಿಸಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com