ಅಯೋಧ್ಯೆ ವಿವಾದ ಎರಡೂ ಸಮುದಾಯಕ್ಕೆ ಉತ್ತಮ  ತೀರ್ಪು: ಸಿಂಘ್ವಿ

ನಿರಂತರ ವಾದ -ಪ್ರತಿವಾದದ ನಂತರ ಅಂತಿಮ ಹಂತಕ್ಕೆ ತಲುಪಿರುವ ಅಯೋಧ್ಯೆ ರಾಮಜನ್ಮ ಭೂಮಿ ಮೂಲ ನಿವೇಶನದ ಮಾಲೀಕತ್ವದ  ತೀರ್ಪು ಇನ್ನು ಕೆಲವೇ ದಿನಗಳಲ್ಲಿ ಹೊರ ಬರಲಿದೆ.
ಅಭಿಷೇಕ್ ಮನು ಸೀಂಘ್ವಿ
ಅಭಿಷೇಕ್ ಮನು ಸೀಂಘ್ವಿ
Updated on

ನವದೆಹಲಿ: ನಿರಂತರ ವಾದ -ಪ್ರತಿವಾದದ ನಂತರ ಅಂತಿಮ ಹಂತಕ್ಕೆ ತಲುಪಿರುವ ಅಯೋಧ್ಯೆ ರಾಮಜನ್ಮ ಭೂಮಿ ಮೂಲ ನಿವೇಶನದ ಮಾಲೀಕತ್ವದ  ತೀರ್ಪು ಇನ್ನು ಕೆಲವೇ ದಿನಗಳಲ್ಲಿ ಹೊರ ಬರಲಿದೆ.

ದೇಶದ ಅತೀ ದೊಡ್ಡ ವಿವಾದವಾದ ಅಯೋಧ್ಯೆ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡುವ ತೀರ್ಪು ಎರಡೂ ಸಮುದಾಯಕ್ಕೆ ಉತ್ತಮ  ತೀರ್ಪು ಆಗಲಿದೆ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸೀಂಘ್ವಿ ಹೇಳಿದ್ದಾರೆ 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು , ಸರ್ವೋಚ್ಛ ನ್ಯಾಯಾಲಯದಿಂದ ಬಹುಸಂಖ್ಯಾತ ಮತ್ತು ಅಲ್ಪ  ಸಂಖ್ಯಾತ ಸಮುದಾಯದ ಪರವಾಗಿ  ತೀರ್ಪು ಬರಲಿದೆ ಎಂಬ  ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿವಾದ ಬಗೆಹರಿಸಲು ಸರಕಾರ ಎಷ್ಟೇ ಪ್ರಯತ್ನ ಮಾಡಿದರೂ ಅದನ್ನು ಸರ್ವರೂ ಒಪ್ಪಲು ಕಷ್ಟ. ಆದರೆ ಕೋರ್ಟ್ ಈ ಬಗ್ಗೆ ತೀರ್ಪು ನೀಡುವುದು ಉತ್ತಮ ವಿಚಾರ ಎಂದು ಸಿಂಘ್ವಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com