ಅಕ್ಟೋಬರ್ 27ಕ್ಕೆ ಪ್ರಧಾನಿ ಮೋದಿ 'ಮನ್‌ ಕಿ ಬಾತ್'

ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶವಾಣಿಯ ತಿಂಗಳ ಜನಪ್ರಿಯ ಕಾರ್ಯಕ್ರಮ "ಮನ್ ಕಿ ಬಾತ್' ಇದೇ 27ರಂದು ಮೂಡಿಬರಲಿದೆ. 
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶವಾಣಿಯ ತಿಂಗಳ ಜನಪ್ರಿಯ ಕಾರ್ಯಕ್ರಮ "ಮನ್ ಕಿ ಬಾತ್' ಇದೇ 27ರಂದು ಮೂಡಿಬರಲಿದೆ. 

ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಧಾನಿ ದೇಶ-ವಿದೇಶದ ಭಾರತೀಯರೊಂದಿಗೆ ತಮ್ಮ ಚಿಂತನೆ ಹಂಚಿಕೊಳ್ಳಲಿದ್ದಾರೆ.

ದೀಪಾವಳಿಯ ದಿನವಾದ ಭಾನುವಾರ ಬೆಳಿಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ಮನ್ ಕಿ ಬಾತ್ ಅವರ 58 ನೇ ಆವೃತ್ತಿಯಾಗಿದೆ.

ಇದು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲಾ ವಾಹಿನಿಗಳಲ್ಲಿ ಮತ್ತು ಏರ್‌ ನ್ಯೂಸ್ ವೆಬ್‌ಸೈಟ್ www.newsonair.com ಮತ್ತು 'ನ್ಯೂಸ್ ಏರ್ ಮೊಬೈಲ್ ಅಪ್ಲಿಕೇಶನ್' ನಲ್ಲಿ ಪ್ರಸಾರವಾಗಲಿದೆ. ಇದು ಪ್ರಧಾನಿ ಕಚೇರಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಆಕಾಶವಾಣಿ ಮತ್ತು ಡಿಡಿ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com