ರಸ್ತೆಯಲ್ಲಿ ವಿದ್ಯಾರ್ಥಿನಿಯ ಅದ್ಭುತ ಸ್ಟಂಟ್; ವಿಡಿಯೋ ನೋಡಿದ್ರಿ ನೀವು ದಂಗಾಗ್ತೀರಾ?

ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ರಸ್ತೆ ಮಧ್ಯೆ ಅದ್ಭುತ ಸ್ಟಂಟ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. 
ವಿದ್ಯಾರ್ಥಿಯರು
ವಿದ್ಯಾರ್ಥಿಯರು
Updated on

ಬೆಂಗಳೂರು: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ರಸ್ತೆ ಮಧ್ಯೆ ಅದ್ಭುತ ಸ್ಟಂಟ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. 

ಈ ವಿಡಿಯೋ ನೋಡಿದ ರೋಮಾನಿಯನ್ ನ ನಿವೃತ್ತ ಜಿಮ್ನಾಸ್ಟಿಕ್ ಸ್ಪರ್ಧಿ ನಾದಿಯಾ ಕೊಮಾನೆಸಿ ಫಿದಾ ಆಗಿದ್ದು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. 

ಟಿಕ್ ಟಾಕ್ ಉದ್ದೇಶಕ್ಕಾಗಿ ಈ ವಿಡಿಯೋವನ್ನು ಮಾಡಲಾಗಿದೆ. ವಿದ್ಯಾರ್ಥಿಗಳಿಬ್ಬರು ಸಮವಸ್ತ್ರದಲ್ಲಿ ನಡು ರಸ್ತೆಯಲ್ಲೇ ಕಠಿಣವಾದ ಜಿಮ್ನಾಸ್ಟಿಕ್ಸ್ ಅನ್ನು ಪ್ರದರ್ಶಿಸಿದ್ದರು. 

ಈ ದೃಶ್ಯವನ್ನು ಎಲ್ಲಿ ವಿಡಿಯೋ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ಆದರೆ ವಿದ್ಯಾರ್ಥಿಗಳು ಮಾಡಿರುವ ಜಿಮ್ನಾಸ್ಟಿಕ್ಸ್ ಅಷ್ಟು ಸುಲಭವಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವ ಕಳೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಮುಂಜಾಗೃತ ಕ್ರಮವಿಲ್ಲದೆ ಮಾಡುವುದು ಅಪಾಯಕಾರಿ, ಅಂತಹುದರಲ್ಲಿ ಶಾಲಾ ಬ್ಯಾಗ್ ಧರಿಸಿಯೂ ಜಿಮ್ನಾಸ್ಟಿಕ್ಸ್ ಮಾಡಿರುವುದು ಸಾಹಸವೇ ಸರಿ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com